ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶ ಇದೇ ತಿಂಗಳ 10ನೇ ತಾರೀಖಿನಂದು ಪ್ರಕಟವಾಗುವ ಸಾಧ್ಯತೆಗಳಿವೆ.
ಕಳೆದ ಮಾರ್ಚ್ 1ರಿಂದ 22 ರವರೆಗೆ ರಾಜ್ಯದಲ್ಲಿ 1120 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದಾರೆ. ಒಟ್ಟಾರೆ ಏಳು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಮಾ.25 ರಿಂದ ಮೌಲ್ಯಮಾಪನ ಆರಂಭವಾಗಿದೆ.
ಇನ್ನೇನು ಮೌಲ್ಯಮಾಪನ ಕಡೆಯ ಹಂತಕ್ಕೆ ತಲುಪಿದ್ದು, ಇನ್ನೊಂದು ವಾರದಲ್ಲಿ ಕಂಪ್ಯೂಟರೀಕರಣ ಕೂಡ ಆಗಲಿದೆ. ಎಲ್ಲವೂ ಅಂದುಕೊಂಡ ಸಮಯಕ್ಕೇ ಮುಕ್ತಾಯವಾದರೆ ಏ.10 ಅಥವಾ ಆಸುಪಾಸಿನ ದಿನದಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.