ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಟಿಕೆಟ್ ಕೇಳಿದ ಸಿಟ್ಟಿನಲ್ಲಿ ಚಲಿಸುತ್ತಿರುವ ರೈಲಿನಿಂದ ಹೊರಕ್ಕೆ ತಳ್ಳಿ ಟಿಟಿಇಯನ್ನೇ ಕೊಲೆಗೈದ ಆಘಾತಕಾರಿ ಘಟನೆಯೊಂದು ಕೇರಳದ ತ್ರಿಶ್ಯೂರ್ ಪರಿಸರದಲ್ಲಿ ನಡೆದಿದೆ.
ಎರ್ನಾಕುಳಂ ಮೂಲದ ಕೆ. ವಿನೋದ್ ಮೃತಪಟ್ಟ ರೈಲ್ವೆ ಸಿಬ್ಬಂದಿ ಆಗಿದ್ದು, ಆರೋಪಿ ರಜನಿಕಾಂತ್ ಎಂಬಾತನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈತ ಅನ್ಯರಾಜ್ಯದವನಾಗಿದ್ದು, ಕೆರಳದಲ್ಲಿ ಕಾರ್ಮಿಕ ವೃತ್ತಿಯಲ್ಲಿದ್ದ ಎಂದು ಹೇಳಲಾಗಿದೆ. ಕಂಠಪೂರ್ತಿ ಮದ್ಯ ಸೇವಿಸಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತನಲ್ಲಿ ಟಿಟಿಇ ಟಿಕೆಟ್ ನೀಡುವಂತೆ ಕೇಳಿದ್ದು, ಇದರಿಂದ ಸಿಟ್ಟಿಗೊಳಗಾದ ಈತ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ತ್ರಿಶೂರ್ ವೇಲಪ್ಪಯ್ಯ ಎಂಬಲ್ಲಿ ನಡೆದಿದೆ.