ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರದ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ಆಟ ಆಡುತ್ತಿದ್ದ ಎರಡು ವರ್ಷದ ಬಾಲಕ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದಾನೆ.
16 ಅಡಿ ಕೊಳವೆ ಇದಾಗಿದ್ದು, ರಾತ್ರಿಯಿಡೀ ಮಗುವನ್ನು ಹೊರತರಲು ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.
ರಾತ್ರಿಯಿಡೀ ಕಾರ್ಯಾಚರಣೆ ನಡೆದಿದೆ. ಮಗುವಿಗೆ ಉಸಿರಾಟದ ಸಮಸ್ಯೆ ಆಗದಂತೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಕಾರ್ಯಾಚರಣೆ ವೇಳೆ ಕಲ್ಲುಬಂಡೆಗಳು ಅಡ್ಡಿಯಾಗಿದ್ದು, ಅದನ್ನು ತೆಗೆಯುವ ವೇಳೆ ಮಗುವಿನ ಮೇಲೆ ಮಣ್ಣು ಬಿದ್ದಿದೆ. ಕ್ಯಾಮೆರಾ ಮೂಲಕ ಮಗುವಿನ ಚಲನವಲನದ ಮೇಲೆ ಗಮನ ಇಡಲಾಗಿದೆ. ಮಗು ಕಾಲು ಅಲ್ಲಾಡಿಸುವ ವಿಡಿಯೋ ಹೊರಬಿದ್ದಿದ್ದು, ಮಗು ಬದುಕಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಮಗುವಿನ ತಾತ ನಿನ್ನೆಯಷ್ಟೇ ಕೊರೆಸಿದ್ದ ಕೊಳವೆ ಬಾವಿಗೆ ಕಂದಮ್ಮ ಬಿದ್ದಿದ್ದು, ಮಗು ಬದುಕಿ ಬರಲಿ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.
ಸಾತ್ವಿಕ್ ಬದುಕಿ ಬರಲಿ ಎಂದು ಇಡೀ ರಾಜ್ಯವೇ ಪ್ರಾರ್ಥನೆ ಮಾಡುತ್ತಿದೆ. ಸಾತ್ವಿಕ್ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.