ಮಕ್ಕಳ ಒಂದು ವರ್ಷ ಬರ್ಥ್‌ಡೇ ಎಷ್ಟು ಗ್ರಾಂಡ್ ಸಾಧ್ಯವೋ ಅಷ್ಟು ಗ್ರ್ಯಾಂಡ್ ಆಗಿ ಮಾಡುವ ಜನ ಒಂದು ಕಡೆಯಾದ್ರೆ ಮಕ್ಕಳಿಗೆ ನೆನಪಿರೋದಿಲ್ಲ ಎಂದು ಸೆಲೆಬ್ರೇಟ್ ಮಾಡೋದಿಲ್ಲ ಎನ್ನುವವರೂ ಇದ್ದಾರೆ. ತಮ್ಮಿಷ್ಟಕ್ಕೆ ಸಿಂಪಲ್ ಆದ ಸೆಲೆಬ್ರೇಷನ್ ಅಥವಾ ಟ್ರಾವೆಲ್ ಮಾಡುವ ಜನರೂ ಇದ್ದಾರೆ.
ಮಕ್ಕಳ ಜನ್ಮದಿನ ಯಾಕೆ ಆಚರಿಸಬೇಕು?
ತುಂಬಾ ಸಿಂಪಲ್ ಮಕ್ಕಳ ಖುಷಿಗೋಸ್ಕರ, ಒಂದು ವರ್ಷ, ಎರಡು ವರ್ಷ ಎಷ್ಟೇ ವರ್ಷ ಆಗಲಿ ಅವರು ಹುಟ್ಟು ಹಬ್ಬವನ್ನು ಎಂಜಾಯ್ ಮಾಡ್ತಾರೆ. ಸಂಪೂರ್ಣವಾಗಿ ನೆನಪಿಲ್ಲ ಎಂದರೂ ಆ ಖುಷಿ ಭಾವನೆ ಸಾ ನೆನಪಿರುತ್ತದೆ.
ಅವರ ಐಡೆಂಟಿಸಿ ಹಾಗೂ ಸೆಲ್ಫ್ ಎಸ್ಟೀಮ್ ಮತ್ತು ಕಾನ್ಫಿಡೆನ್ಸ್‌ನ್ನು ಹೆಚ್ಚು ಮಾಡುತ್ತದೆ.
ಫ್ಯಾಮಿಲಿ ಸಂಬಂಧಗಳು ಗಟ್ಟಿಯಾಗುತ್ತವೆ.
ಹೇಗೆ ಒಂದು ವರ್ಷ ಕಳೆಯುತ್ತದೆ ಎಂದು ಗೊತ್ತಾಗುತ್ತದೆ.
ಮುಂದೆ ಅದನ್ನು ನೋಡಿದಾಗ ನಾನು ನನ್ನ ಪೋಷಕರ ಜೀವನದಲ್ಲಿ ಎಷ್ಟು ಮುಖ್ಯ ಎಂದು ಅರ್ಥವಾಗುತ್ತದೆ.
ಪ್ರತೀ ವರ್ಷವೂ ಜನ್ಮದಿನ ಆಚರಿಸಲು ಅವಕಾಶ ಸಿಕ್ಕಿದೆ ಎಂದಾದರೆ ಅದು ಖುಷಿ ವಿಷಯ ಅಲ್ವಾ? ಎಷ್ಟೋ ಜನರಿಗೆ ಬರ್ಥ್‌ಡೇ ಸೆಲೆಬ್ರೇಟ್ ಮಾಡುವ ಚಾನ್ಸ್ ಸಿಗೋದೇ ಇಲ್ಲ. ಬದುಕನ್ನು ಸಂಭ್ರಮಿಸಿ