ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ತಾಯಿ ತನ್ನ ಮಗುವಿನ ಅಳೋ ಸದ್ದು ಕೇಳಿದಾಗ ನೊಂದುಕೊಳ್ಳುತ್ತಾಳೆ, ಆದರೆ ಕೊಳವೆ ಬಾವಿಯಿಂದ ಈಗಷ್ಟೇ ಹೊರಬಂದ ಕಂದಮ್ಮ ಸಾತ್ವಿಕ್ ತಾಯಿ ಮಗನ ಅಳು ಸದ್ದು ಕೇಳಿ ಖುಷಿಪಟ್ಟಿದ್ದಾರೆ.
ಮಗು ಹುಟ್ಟಿದ ಸಮಯದಲ್ಲಿ ಅಳುವಿನ ಸದ್ದು ಕೇಳಿ ಸಂತೋಷಪಡುತ್ತಾಳೆ, ಇದೀಗ ಕೊಳವೆ ಬಾವಿಯಿಂದ ಕಂದ ಇನ್ನೇನು ಹೊರಗೆ ಬರುತ್ತಿದ್ದಾನೆ ಎನ್ನುವಾಗ ಜೋರಾಗಿ ಅತ್ತಿದ್ದಾನೆ. ಸಾತ್ವಿಕ್ ತಾಯಿ ಪೂಜಾ ಮಗನ ಅಳು ಸದ್ದು ಕೇಳಿ ಮಗು ಬದುಕಿದೆ ಎಂದು ಖುಷಿಪಟ್ಟಿದ್ದಾರೆ.
ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮ ಮಗುವನ್ನು ದೇವರು ಬದುಕಿಸಿಕೊಟ್ಟಿದ್ದಾನೆ. ದೇವರ ರೂಪದಲ್ಲಿ ಇಷ್ಟೊಂದು ಜನ ಬಂದು ನನ್ನ ಮಗುವನ್ನು ಉಳಿಸಿದ್ದಾರೆ. ಎಷ್ಟೊಂದು ಜನ ದೂರದೂರಿನಲ್ಲಿ ಕುಳಿತು ಸಾತ್ವಿಕ್ ಬದುಕಲಿ ಎಂದು ಹರಸಿದ್ದಾರೆ. ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.