ದೇವಸ್ಥಾನದ ಆನೆಯ ತುಳಿತಕ್ಕೆ ಪ್ರಾಣಬಿಟ್ಟ ಮಾವುತ: ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆನೆ ತುಳಿತಕ್ಕೆ ಪುತ್ತುಪ್ಪಲ್ಲಿ ಅರವಿಂದ್ ಎಂಬ 26 ವರ್ಷದ ಮಾವುತ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಟಿವಿ ಪುರಂ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಂಡುಬಂದಿದೆ.

ಬುಧವಾರ (ಏ.03) ರಾತ್ರಿ 9:00 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಭಯಾನಕ ಘಟನೆಯ ದೃಶ್ಯಾವಳಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕುಂಜುಲಕ್ಷ್ಮಿ ಎಂದು ಕರೆಯಲ್ಪಡುವ ಈ ಆನೆಯನ್ನು ದೇವಾಲಯದ ಸಮಾರಂಭಕ್ಕೆ ತಕ್ಕಂತೆ ಅಲಂಕರಿಸಲಾಗಿತ್ತು. ಶಾಂತವಾಗಿದ್ದ ಆನೆ ಏಕಾಏಕಿ ಓಡಿ ಬಂದು ಆನೆಯ ಪಾದದ ಬಳಿ ನಿಂತಿದ್ದ ಮಾವುತ ಅರವಿಂದನನ್ನು ತುಳಿದು ಹಾಕಿದೆ. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ, ವೈಕಂ ತಾಲೂಕು ಆಸ್ಪತ್ರೆ ವೈದ್ಯರು ಅರವಿಂದ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!