ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಸ್ತಿ ಮೌಲ್ಯ ಎಷ್ಟು ಎಂಬ ಕುತೂಹಲ ಇದ್ದರೆ ಮುಂದೆ ಓದಿ…
ಗುರುವಾರ ನಾಮಪತ್ರ ಸಲ್ಲಿಕೆ ವೇಳೆ ಅವರು ನೀಡಿದ ಮಾಹಿತಿ ಹೀಗಿದೆ:
ಹೆಚ್.ಡಿ. ಕುಮಾರಸ್ವಾಮಿ ಕುಟುಂಬದ ಒಟ್ಟು ಆಸ್ತಿ 217.21 ಕೋಟಿ
ಹೆಚ್‌ಡಿಕೆ, ಅತ್ತಿಗೆ ಭವಾನಿ ರೇವಣ್ಣ ಅವರಿಂದ 3.16 ಲಕ್ಷ ರೂ., ಪತ್ನಿ ಅನಿತಾ ಕುಮಾರಸ್ವಾಮಿ ಅವರಿಂದ 8.5 ಕೋಟಿ ರೂ. ಸಾಲ ಪಡೆದಿದ್ದಾರೆ.
ಅವರ ಒಟ್ಟು ಆಸ್ತಿ 62.82 ಕೋಟಿ ರೂ. ಚರಾಸ್ತಿ 10.71 ಕೋಟಿ ರೂ., ಸ್ಥಿರಾಸ್ತಿ 43.94 ಕೋಟಿ ರೂ. ಅವರು ವಿವಿಧ ಕಡೆ ಮಾಡಿರುವ ಸಾಲ 19.12 ಕೋಟಿ ರೂ. ಅವರಲ್ಲಿ 47 ಲಕ್ಷ ರೂ. ಮೌಲ್ಯದ 750ಗ್ರಾಂ. ಚಿನ್ನಾಭರಣ ಇದೆ. 9.62 ಲಕ್ಷ ರೂ. ಮೌಲ್ಯದ 12.5 ಕೆಜಿ ಬೆಳ್ಳಿ, 2.60 ಲಕ್ಷ ರೂ. ಮೌಲ್ಯದ 4 ಕ್ಯಾರೆಟ್ ವಜ್ರ ಇದೆ.
ಸದ್ಯ ಲೋಕಾಯುಕ್ತ, ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳನ್ನು ಮಾಜಿ ಮುಖ್ಯಮಂತ್ರಿಗಳು ಎದುರಿಸುತ್ತಿದ್ದಾರೆ. ಲೋಕಾಯುಕ್ತದಲ್ಲಿ 3 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ಹೆಚ್‌ಡಿಕೆಗಿಂತಲೂ ಅವರ ಪತ್ನಿಯೇ ಶ್ರೀಮಂತೆ!
ಪತ್ನಿ ಅನಿತಾ ಕುಮಾರಸ್ವಾಮಿ ಅವರ ಆಸ್ತಿ 154.39 ಕೋಟಿ ರೂ.ಗಳಾಗಿದ್ದು, ಚರಾಸ್ತಿ 90.32 ಕೋಟಿ ರೂ. ಹಾಗೂ ಸ್ಥಿರಾಸ್ತಿ 64.07 ಕೋಟಿ ರೂ. ಅನಿತಾರಿಗೆ 63.05 ಕೋಟಿ ರೂ. ಸಾಲವಿದೆ. ಅವರ ಬಳಿ 2.41 ಕೋಟಿ ರೂ. ಮೌಲ್ಯದ 3.8 ಕೆ.ಜಿ. ಚಿನ್ನಾಭರಣ, 13 ಲಕ್ಷ ರೂ. ಮೌಲ್ಯದ 17 ಕೆ.ಜಿ. ಬೆಳ್ಳಿ ಹಾಗೂ 33 ಲಕ್ಷ ರೂ. ಮೌಲ್ಯದ 50 ಕ್ಯಾರೆಟ್ ಡೈಮಂಡ್ ಇದೆ.