ʼತೆರೆದ ಕೊಳವೆ ಬಾವಿ ಮುಚ್ಚಿದ್ರೆ ಐನೂರು ರೂಪಾಯಿ ಕೊಡ್ತೀನಿʼ ರೈತನಿಂದ ಹೊಸ ಅಭಿಯಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ತೆರೆದ ಕೊಳವೆ ಬಾವಿಗಳಿಂದ ಮಕ್ಕಳು ಅದರಲ್ಲಿ ಬೀಳುತ್ತಿದ್ದಾರೆ. ಇಂಥ ಪ್ರಕರಣಗಳು ದಾಖಲಾಗುತ್ತಲೇ ಇವೆ, ನಿನ್ನೆಯಷ್ಟೆ ವಿಜಯಪುರದಲ್ಲಿ ಸಾತ್ವಿಕ್‌ ಎನ್ನುವ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದಾನೆ.

ಸತತ ಕಾರ್ಯಾಚರಣೆ ನಂತರ ಬಾಲಕ ಜೀವಂತವಾಗಿ ಹೊರಬಂದಿದ್ದಾನೆ. ಆದರೆ ಇದು ಒಂದು ದಿನದ ಕಥೆ ಅಲ್ಲ. ಎಲ್ಲ ಮಕ್ಕಳೂ ಸಾತ್ವಿಕ್‌ನಷ್ಟು ಅದೃಷ್ಟವಂತರೂ ಆಗಿರುವುದಿಲ್ಲ.

ಹೀಗಾಗಿ ರೈತರೊಬ್ಬರು ನೂತನ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ರೈತ ಶಿವಣ್ಣ ಚಳ್ಳಕೇರಿ ರಾಜ್ಯದಲ್ಲಿ ಎಲ್ಲಿ ಕೊಳವೆ ಬಾವಿ ಕಂಡರೂ ಮುಚ್ಚಿಬಿಡಿ. ಪ್ರೋತ್ಸಾಹ ಧನದಂತೆ ನಾನು ಐನೂರು ರೂಪಾಯಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಮೊದಲ ಹಂತವಾಗಿ ಒಂದು ಲಕ್ಷ ರೂಪಾಯಿಯನ್ನು ಬ್ಯಾಂಕ್‌ನಲ್ಲಿ ಇಡುತ್ತೇನೆ. ಯಾರೇ ಆಗಲಿ ಕೊಳವೆ ಬಾವಿ ಮುಚ್ಚಿ, ಫೋಟೊ ದೃಢೀಕರಣ ಪತ್ರ ತೋರಿಸಿ ಹಣ ಪಡೆಯಿರಿ ಎಂದು ಹೇಳಿದ್ದಾರೆ.

ಈ ಹಿಂದೆ ಕೂಡ ಕಾವೇರಿ ಎನ್ನುವ ಬಾಲಕಿ ಕೊಳವೆ ಬಾವಿಗೆ ಬಿದ್ದು ಮೃತಪಟ್ಟಿದ್ದಳು. ಆಗಲೂ ಐನೂರು ರೂಪಾಯಿ ನೀಡಿ ಸಾಕಷ್ಟು ಬಾವಿಗಳನ್ನು ಶಿವಣ್ಣ ಮುಚ್ಚಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!