ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಸಿಲಿಂಡರ್ ಸ್ಫೋಟ, ಕಟ್ಟಡ ಬೆಂಕಿ, ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸ್ಫೋಟದಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಆತಂಕಕಾರಿ ಸಂಗತಿಯಾಗಿದೆ.
ಇದೀಗ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಬಿಸಿಲಿನಲ್ಲಿ ನಿಂತಿದ್ದರಿಂದ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರು ಹೊರವಲಯದ ಬಿಡದಿಯ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಪೋದಲ್ಲಿ ನಡೆದಿದೆ.
ಬೆಳಗ್ಗೆಯಿಂದಲೇ ಎಲೆಕ್ಟ್ರಿಕ್ ಬಸ್ ಬಿಸಿಲಿನಲ್ಲಿದ್ದು, ಬ್ಯಾಟರಿ ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿದೆ. ದಟ್ಟ ಹೊಗೆ ಇಡೀ ಬಸ್ ಅನ್ನು ಆವರಿಸಿದೆ. ಅದೃಷ್ಟವಶಾತ್ ಸಿಬ್ಬಂದಿ ಅಥವಾ ಪ್ರಯಾಣಿಕರು ಬಸ್ನಲ್ಲಿ ಇರಲಿಲ್ಲ, ಆದ್ದರಿಂದ ಭಾರಿ ಅನಾಹುತ ತಪ್ಪಿದೆ. ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಬ್ಯಾಟರಿ ತೆಗೆದಿದ್ದಾರೆ.