ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಗಾದಿ ಹಬ್ಬವನ್ನು ಮನೆಯಲ್ಲಿ ಆಚರಿಸಲು ಸಿದ್ಧರಾದವರಿಗೆ ಸಾಲು ಸಾಲು ರಜೆಗಳು ನಿಮಗಾಗಿ ಕಾದು ಕೂತಿದೆ. ಅದೇ ರೀತಿ ನಿಮ್ಮ ಊರಿಗೆ ಅಥವಾ ಪ್ರವಾಸಕ್ಕೆ ಹೋಗಲು ತಯಾರಾಗ್ತಿದ್ರೆ ಬೇವು-ಬೆಲ್ಲ ಎಂಬಂತೆ ಕಹಿ ಸುದ್ದಿ ಕೂಡ ನಿಮಗೆಲ್ಲ ಕಾದಿದೆ.
ಹೌದು, ಖಾಸಗಿ ಬಸ್ ಗಳ ಬೆಲೆ ಏರಿಕೆ ಹೆಚ್ಚಳವಾಗಿದ್ದು ಪ್ರಯಾಣಿಕರಿಗೆ ಆಘಾತ ತಂದಿದೆ. ಯುಗಾದಿ ಹಬ್ಬ ಬಂತೆಂದರೆ ಖಾಸಗಿ ಬಸ್ ಗಳ ಪ್ರಯಾಣ ದರ ಹೆಚ್ಚಾಗಲಿದ್ದು, ಪ್ರಯಾಣಿಕರಿಗೆ ತೊಂದರೆಯಾಗಲಿದೆ.
ಏಪ್ರಿಲ್ 7 ಮತ್ತು ಮಂಗಳವಾರ ಏಪ್ರಿಲ್ 9 ರಂದು ಯುಗಾದಿ ಹಬ್ಬ ಇರಲಿದೆ. ಹೀಗಾಗಿ ಸೋಮವಾರ ರಜೆ ಹಾಕಿ ನಾಳೆಯೇ ಊರಿಗೆ ತೆರಳಲು ಜನರು ಪ್ಲಾನ್ ಮಾಡಿದ್ದಾರೆ. ಇನ್ನೂ ಕೆಲವರು ಇಂದು (ಏ.06) ಆಫೀಸ್ಗೆ ರಜೆ ಹಾಕಿ ಬೆಂಗಳೂರಿನಿಂದ ಹೊರಟಿರುವವರು ಇರುತ್ತಾರೆ. ಅಲ್ಲದೆ ಯುಗಾದಿ ರಜೆ ಒಂದು ದಿನ ಬಿಟ್ಟು ಗುರುವಾರ ರಂಜಾನ್ ರಜೆ ಇರುತ್ತೆ. ಅಲ್ಲದೆ 13 ರಂದು ಎರಡನೇ ಶನಿವಾರ ರಜೆ ಹಾಗೂ 14 ರಂದು ಭಾನುವಾರ ರಜೆ ಇದೆ. ಏಪ್ರಿಲ್ 7 ರಿಂದ ಏಫ್ರಿಲ್ 14ರ ವರೆಗೆ ಬರೊಬ್ಬರಿ 5 ರಜೆಗಳು ಇವೆ. ಹೀಗಾಗಿ ಕೆಲವರು ನಾಳೆಯಿಂದ ವಾರಪೂರ್ತಿ ಗೆ ರಜೆ ಹಾಕಲು ಪ್ಲಾನ್ ಮಾಡಿಕೊಂಡು ಬೆಂಗಳೂರು ಬಿಟ್ಟು ಊರಿಗೆ ಹೊರಡುತ್ತಿರುತ್ತಾರೆ.
ಪಾಲಕರು ಮಕ್ಕಳನ್ನು ಕರೆದುಕೊಂಡು ಪ್ರವಾಸಕ್ಕೆ ಅಥವಾ ಊರಿಗೆ ತೆರಳಲು ಯೋಚಿಸುತ್ತಿರುತ್ತಾರೆ ಯಾಕೆಂದರೆ ಬೇಸಿಗೆ ರಜೆ ಆರಂಭವಾಗಿರುವುದರಿಂದ ಬಸ್ ಪ್ರಯಾಣ ದರ ಆತಂಕಕಾರಿಯಾಗಿ ಏರಿಕೆಯಾಗಿದೆ. ಖಾಸಗಿ ಬಸ್ ಗಳ ಮಾಲೀಕರು ಎರಡರಿಂದ ಮೂರು ಪಟ್ಟು ಪ್ರಯಾಣ ದರ ಹೆಚ್ಚಿಸಿದ್ದಾರೆ.
ಎಷ್ಟು ದರ ಹೆಚ್ಚಳ ಇಲ್ಲಿದೆ ವಿವರ:
ಬೆಂಗಳೂರು-ಶಿವಮೊಗ್ಗ
ಇವತ್ತಿನ ಟಿಕೆಟ್ ದರ: 950 – 1250 ರೂ.
ಬೆಂಗಳೂರು- ಹುಬ್ಬಳ್ಳಿ
ಇಂದಿನ ಟಿಕೆಟ್: 1200 – 1600 ರೂ.
ಬೆಂಗಳೂರು-ಮಂಗಳೂರು
ಇಂದಿನ ದರ: 1000 – 1400 ರೂ.
ಬೆಂಗಳೂರು-ಕಲಬುರುಗಿ
ಇಂದಿನ ದರ: 1400 – 1900 ರೂ.
ಬೆಂಗಳೂರು-ಮಡಿಕೇರಿ
ಇಂದಿನ ದರ: 950 – 1200 ರೂ.
ಬೆಂಗಳೂರು – ಉಡುಪಿ
ಇಂದಿನ ದರ: 1700 – 2200 ರೂ.
ಬೆಂಗಳೂರು-ಧಾರವಾಡ
ಇಂದಿನ ದರ: 1350 – 1750 ರೂ.
ಬೆಂಗಳೂರು-ಬೆಳಗಾವಿ
ಇಂದಿನ ದರ: 1300 – 1800 ರೂ.
ಬೆಂಗಳೂರು – ದಾವಣಗೆರೆ
ಇಂದಿನ ದರ: 900 – 1300 ರೂ.
ಬೆಂಗಳೂರು – ಚಿಕ್ಕಮಗಳೂರು
ಇಂದಿನ ದರ: 1100 – 1300 ರೂ.
ಬೆಂಗಳೂರು – ಬೀದರ್
ಇಂದಿನ ದರ: 1600 – 1800 ರೂ.
ಬೆಂಗಳೂರು – ರಾಯಚೂರು
ಇಂದಿನ ದರ: 1250 – 1600 ರೂ.
ಟಿಕೆಟ್ ದರ ದುಪ್ಪಟ್ಟಾಗಿದ್ದರೂ ಖಾಸಗಿ ಬಸ್ ಗಳು ಮಾತ್ರ ಬಹುತೇಕ ಭರ್ತಿಯಾಗಿವೆ.