ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಸದ್ದಿಲ್ಲದೇ ಕಾಲರಾ ಬಾಧಿಸುತ್ತಿದ್ದು, ಮಲ್ಲೇಶ್ವರಂನಲ್ಲಿರುವ ಪಿಜಿಯಲ್ಲಿ ಯುವತಿಯೊಬ್ಬಳಿಗೆ ಕಾಲರಾ ಸೋಂಕು ಸಮಸ್ಯೆ ನೀಡಿತ್ತು. ಇದಾದ ನಂತರ ಎಚ್ಚೆತ್ತ ಪಿಜಿ ಅಸೋಸಿಯೇಷನ್ಸ್ ಪಿಜಿಯಲ್ಲಿರುವವರಿಗೆ ಟಫ್ ರೂಲ್ಸ್ ಮಾಡಲು ಹೊರಟಿದೆ..
ಗೈಡ್ಲೈನ್ಸ್ ಹೇಗಿರಲಿದೆ?
1 ಪಿಜಿಗಳಲ್ಲಿ ಔಟ್ ಸೈಡ್ ಫುಡ್ ತರುವಂತಿಲ್ಲ, ಯಾವುದೇ ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ಆಹಾರ ಆರ್ಡರ್ ಮಾಡುವಂತಿಲ್ಲ.
2 ಕಡ್ಡಾಯ ಆರ್ ಓ. ವಾಟರ್ ಗಳ ಬಳಕೆಗೆ ಸೂಚನೆ ನೀಡಲಾಗಿದೆ.
3 ಪಿಜಿಗಳಲ್ಲಿ ಬೆಳಗಿನ ಆಹಾರ ರಾತ್ರಿವರೆಗೂ ಇಡುವಂತಿಲ್ಲ. ಮೂರು ಹೊತ್ತೂ ಬಿಸಿ ಆಹಾರ ಸಿದ್ಧ ಮಾಡಿಯೇ ವಾಸಿಗಳಿಗೆ ನೀಡುವುದು.
4 ಪಿಜಿ ವಾಸಿಗಳ ಆರೋಗ್ಯದ ಮೇಲೆ ಮಾಲೀಕರೇ ನಿಗಾ ವಹಿಸಬೇಕು, ಪ್ರತೀ ರೂಮುಗಳಲ್ಲಿ ಯಾರೆಲ್ಲಾ ಇದ್ದಾರೆ ಅವರ ಆರೋಗ್ಯ ಹೇಗಿದೆ ಎಂದು ಗಮನವಹಿಸಬೇಕು.
5 ಯಾವುದೇ ರೀತಿಯ ಆರೋಗ್ಯ ಏರುಪೇರಾದಲ್ಲಿ ಕೂಡಲೇ ಮಾಲೀಕರ ಗಮನಕ್ಕೆ ತರಬೇಕು, ಪೋಷಕರಿಗೆ ಮಾಹಿತಿ ನೀಡಬೇಕು.
6 ಗಮನಕ್ಕೆ ಬಂದ ಕೂಡಲೇ ಮಾಲೀಕರು ಕುಟುಂಬಸ್ಥರ ಮೂಲಕ ಅಥವಾ ಮಾಲೀಕರೇ ಆಸ್ಪತ್ರೆಗೆ ಕಳುಹಿಸುವ ಕೆಲಸ ಮಾಡಬೇಕು.
7 ಪಿಜಿಯನ್ನ ನಿತ್ಯ ಸ್ವಚ್ಛವಾಗಿಡಬೇಕು, ಬಾತ್ರೂಮ್ ಹಾಗೂ ಕೊಠಡಿಗಳನ್ನು ಕ್ಲೀನ್ ಮಾಡಬೇಕು.
ವಾಸಿಗಳು ಕೂಡ ಕಡ್ಡಾಯ ನಿಯಮ ಪಾಲನೆ ಮಾಡಲೇಬೇಕು.