ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಐಪಿಎಲ್ ನ 25ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ RCB ಖಂಡಿತವಾಗಿಯೂ ತನ್ನ ಆಟದ ತಂಡದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲೇ ಬೇಕಿದೆ.
ಎಲ್ಲಾ ಐದು ಪಂದ್ಯಗಳಲ್ಲಿ ಭಯಾನಕ ತಪ್ಪುಗಳನ್ನು ಮಾಡಿದ ಆಸ್ಟ್ರೇಲಿಯನ್ ಆಟಗಾರರಾದ ಕ್ಯಾಮೆರೂನ್ ಗ್ರೀನ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಈ ಆಟಕ್ಕೆ ಕೊಕೇನ್ ಪಡೆಯುವುದು ಖಚಿತ. ಇವರ ಬದಲು 25 ವರ್ಷದ ಸ್ಟಾರ್ ಆಲ್ರೌಂಡರ್ ವಿಲ್ ಜ್ಯಾಕ್ಸ್ ಮತ್ತು ನ್ಯೂಜಿಲ್ಯಾಂಡ್ನ ಲಾಕಿ ಫರ್ಗ್ಯುಸನ್ ಕಣಕ್ಕಿಳಿಯಬಹುದು. ರಜತ್ ಪಾಟಿದಾರ್ ಸ್ಥಾನದಲ್ಲಿ ಅನುಜ್ ರಾವುತ್ ಆಡಬಹುದು.
ಆರ್ಸಿಬಿ ತಂಡದಲ್ಲಿ ಆಟಗಾರರ ಬದಲಾವಣೆ ಮಾಡಬೇಕು ಎನ್ನುವ ಕೂಗು ಸ್ವತಃ ತಂಡದ ಅಭಿಮಾನಿಗಳಿಂದಲೇ ಕೇಳಿ ಬಂದಿದೆ. ಸ್ಟಾರ್ ಆಟಗಾರರಿದ್ದರೂ ಕೂಡ ಅವರನ್ನು ಬೆಂಚ್ ಕಾಯಿಸುತ್ತಿರುವ ತಂಡದ ಮ್ಯಾನೇಜ್ಮೆಂಟ್ ವಿರುದ್ಧ ಭಾರೀ ಟೀಕೆ ಕೇಳಿ ಬಂದಿದೆ.