Sunday, January 11, 2026

Fashion | ಚಳಿಗಾಲದಲ್ಲಿ ನಿಮ್ಮ ಫ್ಯಾಶನ್ ಮರೆಮಾಚದೆ ಸ್ಟೈಲಿಶ್ ಆಗಿ ಕಾಣೋದು ಹೇಗೆ?

ಚಳಿಗಾಲ ಅಂದರೆ ದಪ್ಪ ಬಟ್ಟೆ ಧರಿಸಿ ಸ್ಟೈಲ್ ಮರೆತುಬಿಡುವ ಕಾಲ ಅನ್ನೋ ಭ್ರಮೆ ಇನ್ನೂ ಹಲವರಿಗೆ ಇದೆ. ಆದರೆ ಸರಿಯಾದ ಆಯ್ಕೆ ಮಾಡಿದರೆ ಚಳಿಯಲ್ಲೂ ನಿಮ್ಮ ಫ್ಯಾಶನ್ ಸೆನ್ಸ್ ಸ್ಪಷ್ಟವಾಗಿ ಕಾಣಿಸಬಹುದು. ದೇಹವನ್ನು ಬೆಚ್ಚಗಿಟ್ಟುಕೊಂಡು, ಟ್ರೆಂಡಿ ಲುಕ್ ಪಡೆಯುವುದು ಅಷ್ಟೇನು ಕಷ್ಟವಲ್ಲ.

ಒಂದೇ ದಪ್ಪ ಜಾಕೆಟ್ ಮೇಲೆ ಅವಲಂಬಿಸುವ ಬದಲು, ಲೇಯರಿಂಗ್‌ ಪ್ರಯೋಗಿಸಿ. ಇನರ್‌ ಟೀ, ಸ್ವೆಟರ್ ಮತ್ತು ಲೈಟ್ ಜಾಕೆಟ್ ಸೇರಿಸಿದರೆ ಸ್ಟೈಲ್ ಕೂಡ ಹೆಚ್ಚುತ್ತದೆ, ಬೆಚ್ಚಗಿನ ಅನುಭವವೂ ಸಿಗುತ್ತದೆ.

ಚಳಿಗಾಲ ಅಂದ್ರೆ ಕಪ್ಪು, ಬೂದು ಮಾತ್ರವಲ್ಲ. ಮರೂನ್, ಆಲಿವ್ ಗ್ರೀನ್, ಮಸ್ಟರ್ಡ್ ಯೆಲ್ಲೋ ಬಣ್ಣಗಳು ಲುಕ್‌ಗೆ ಹೊಸ ತಾಜಾತನ ನೀಡುತ್ತವೆ.

ಇದನ್ನೂ ಓದಿ: FOOD | ಅನ್ನದ ಜೊತೆಗೆ ಸವಿಯಲು ರುಚಿಕರ ಸಿಗಡಿ ಸುಕ್ಕಾ ಟ್ರೈ ಮಾಡಿ!

ಸ್ಕಾರ್ಫ್, ಬೀನಿ ಕ್ಯಾಪ್, ಗ್ಲವ್ಸ್ ಇವು ಫ್ಯಾಶನ್‌ಗೆ ಪ್ಲಸ್ ಪಾಯಿಂಟ್. ಸರಳ ಡ್ರೆಸ್ ಕೂಡ ಸ್ಟೈಲಿಶ್ ಆಗಿ ಕಾಣಿಸುತ್ತದೆ.

ಬೂಟ್ಸ್ ಅಥವಾ ಸ್ನೀಕರ್ಸ್ ಆಯ್ಕೆ ಲುಕ್‌ನ್ನು ಪೂರ್ಣಗೊಳಿಸುತ್ತದೆ. ಆರಾಮದ ಜೊತೆ ಟ್ರೆಂಡ್ ಕೂಡ ಮುಖ್ಯ. ಚಳಿಗಾಲ ಫ್ಯಾಶನ್‌ನ್ನು ಮರೆಮಾಚಲು ಅಲ್ಲ, ನಿಮ್ಮನ್ನು ಇನ್ನಷ್ಟು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುವ ಸಣ್ಣ ಅವಕಾಶ.

error: Content is protected !!