ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2024 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಸೋಲಿನಿಂದ ಕಂಗಾಲಾಗಿದೆ.ಜೊತೆಗೆ ಭಾನುವಾರ ನಡೆದ ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಕೇವಲ 1 ರನ್‌ಗಳಿಂದ ಸೋಲು ಕಂಡಿತ್ತು.
ಇದರ ನಡುವೆ ವಿರಾಟ್ ಕೊಹ್ಲಿಗೆ ಮತ್ತೊಂದು ಆಘಾತ ಎದುರಾಗಿದೆ. ಔಟ್ ತೀರ್ಪಿಗೆ ಅಂಪೈರ್ ಜೊತೆ ವಾಗ್ವಾದ ನಡೆಸಿದ ಕೊಹ್ಲಿಗೆ ಪಂದ್ಯದ ಶೇಕಡಾ 50 ರಷ್ಟು ಮೊತ್ತ ದಂಡ ವಿಧಿಸಲಾಗಿದೆ.
ವಿರಾಟ್ ಕೊಹ್ಲಿ ಲೆವೆಲ್ 1 ಕೋಡ್ ಉಲ್ಲಂಘಿಸಿದ್ದಾರೆ. ಕೊಹ್ಲಿ ತಮ್ಮ ತಪ್ಪನ್ನು ಮ್ಯಾಚ್ ರೆಫ್ರಿ ಬಳಿ ಒಪ್ಪಿಕೊಂಡಿದ್ದಾರೆ. ಇದೀಗ ಕೊಹ್ಲಿ ಪಂದ್ಯದ ಶೇಕಡಾ 50 ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಲು ಸೂಚಿಸಿದೆ. ನಾಯಕ ಫಾಫ್ ಡುಪ್ಲಸಿಸ್‌ಗೆ ನಿಧಾನಗತಿಯ ಓವರ್ ರೇಟ್‌ನಿಂದ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಇದರ ಬೆನ್ನಲ್ಲೇ ಕೊಹ್ಲಿಗೂ ದಂಡ ವಿಧಿಸಲಾಗಿದೆ.
ಕೆಕೆಆರ್ ನೀಡಿದ್ದ ಟಾರ್ಗೆಟ್ ಚೇಸಿಂಗ್ ವೇಳೆ 3ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಔಟಾಗಿದ್ದರು. ಹರ್ಷಿತ್ ರಾಣಾ ಫುಲ್ ಟಾಸ್ ಎಸೆತ ನೋ ಬಾಲ್ ಆಗಿತ್ತು ಅನ್ನೋದು ಕೊಹ್ಲಿ ವಾದ. ಫುಲ್ ಟಾಸ್ ಎಸೆತದ ಕೊಹ್ಲಿ ಸೊಂಟದ ಮೇಲಿತ್ತು. ತೀರ್ಪು ವಿವಾದವಾಗುತ್ತಿದ್ದಂತೆ ಥರ್ಡ್ ಅಂಪೈರ್‌ಗೆ ಪರಿಶೀಲನೆಗೆ ನೀಡಲಾಗಿತ್ತು. ಆದರೆ ಅಂಪೈರ್ ನೀಡಿದ ಔಟ್ ತೀರ್ಪಿಗೆ ಕೊಹ್ಲಿ ಗರಂ ಆಗಿದ್ದರು. ಪೆವಿಲಿಯನ್ ಸಾಗುತ್ತಿದ್ದ ವೇಳೆ ಅಂಪೈರ್ ಬಳಿ ತೆರಳಿ ವಾಗ್ವಾದ ನಡೆಸಿದ್ದಾರೆ. ಹೀಗಾಗಿ ದಂಡ ವಿಧಿಸಲಾಗಿದೆ.