ಹೊಸದಿಗಂತ ವರದಿ, ಚಿತ್ರದುರ್ಗ, :
ಭಾರತೀಯ ಜನತಾ ಪಾರ್ಟಿಯ ವತಿಯಿಂದ ಎನ್.ಡಿ.ಎ. ಅಭ್ಯರ್ಥಿ ಗೋವಿಂದ ಕಾರಜೋಳರವರ ಪರವಾಗಿ ನಗರದ ೨೨ನೇ ವಾರ್ಡನ ಜೆಸಿಆರ್ ಬಡಾವಣೆಯ ೧ ರಿಂದ ೫ ನೇ ಕ್ರಾಸ್ವರೆಗೆ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಮುಖ್ಯಸಚೇತಕ ಎನ್.ರವಿಕುಮಾರ್ ನೇತೃತ್ವದಲ್ಲಿ ಮನೆ, ಮನೆ ಪ್ರಚಾರ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರವಿಕುಮಾರ್, ಇಂದಿನ ದಿನಮಾನಗಳಲ್ಲಿ ರಾಜ್ಯದಲ್ಲಿ ಆರಾಜಕತೆ ತಾಂಡವಾಡುತ್ತಿದೆ. ಎಲ್ಲೆಂದರಲ್ಲಿ ಕೊಲೆಗಳು, ಅತ್ಯಾಚಾರಗಳು, ದಲಿತರ ಮೇಲೆ ಹಲ್ಲೆ ನಡೆಯುತ್ತಿವೆ. ರಾಜ್ಯದ ಜವಾಬ್ದಾರಿ ಹೊತ್ತ ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ ಉಡಾಫೆಯ ಮಾತಗಳನ್ನು ಆಡುತ್ತಿದೆ. ಜನತೆಯ ಬಗ್ಗೆ ಕಾಳಜಿ ತೋರಿಸದೆ, ಕೊಲೆ ಮತ್ತು ಹಲ್ಲೆ ಮಾಡಿದವರ ಬಗ್ಗೆ ಕಾಳಜಿ ತೋರುತ್ತಿದೆ. ಸಾವನ್ನಪ್ಪಿದವರ ಬಗ್ಗೆ ಸಾಂತ್ವಾನದ ಮಾತನ್ನು ಸಹ ಆಡುತ್ತಿಲ್ಲ ಎಂದು ಸರ್ಕಾರದ ವಿರುದ್ದ ಕಿಡಿ ಕಾರಿದರು.
ಏ.೨೬ ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಇದರಲ್ಲಿ ೧೪ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ೧೪ ಕ್ಷೇತ್ರಗಳು ಸಹ ಬಿಜೆಪಿಯ ಪರವಾಗಿ ಫಲಿತಾಂಶ ಬರಲಿದೆ. ಇದ್ದಲ್ಲದೇ ಉಳಿದ ೧೪ ಕ್ಷೇತ್ರಗಳಲ್ಲಿಯೂ ಸಹ ಬಿಜೆಪಿಯ ಪರವಾಗಿ ಉತ್ತಮ ಫಲಿತಾಂಶ ಬರಲಿದೆ. ಈ ಬಾರಿಯೂ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬರುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರೋಹಿಣಿ ನವೀನ್, ಬಿಜೆಪಿಯ ನಗರಾಧ್ಯಕ್ಷ ನವೀನ್ ಚಾಲುಕ್ಯ, ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಮಲ್ಲಿಕಾರ್ಜನ್, ಶ್ರೀನಾಥ್, ಪ್ರಕಾಶ್, ಸುರೇಶ್, ವೆಂಕಟೇಶ್, ಸೋಮಣ್ಣ, ರಮೇಶ್, ರವಿಕುಮಾರ್, ಪ್ರದೀಪ್, ಕಲಾ, ಸೋಮಶೇಖರ್, ಹೆಗ್ಗನಗೌಡ, ಸ್ವಾಮಿ, ಮಹೇಶ್, ಗೀತಾ ಸೇರಿದಂತೆ ಇತರರು ಭಾಗವಹಿಸಿದ್ದರು.