ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಈಗ ತಂದೆಯಾಗಿದ್ದಾರೆ. ಪತ್ನಿ ಪಂಖುರಿ ಶರ್ಮಾ ಅವರು ಶುಕ್ರವಾರ (ಏಪ್ರಿಲ್ 26) ರಂದು ತಮ್ಮ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮಗನ ಚಿತ್ರವನ್ನ ತಮ್ಮ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರೋ ಪಾಂಡ್ಯ, ನಮ್ಮ ಮನೆಯಲ್ಲಿ ಗಂಡು ಮಗು ಜನಿಸಿದೆ ಎಂದಷ್ಟೇ ಬರೆದುಕೊಂಡಿದ್ದಾರೆ.
ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ತೆಗೆಸಿರುವ ಫೋಟೋವನ್ನು ಕೃನಾಲ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಹೆಸರು ‘ವಾಯು’ ಎಂದು ಸಹ ಪಾಂಡ್ಯ ಹೇಳಿಕೊಂಡಿದ್ದಾರೆ. ಈ ಫೋಟೋ ಕಂಡು ಪಾಂಡ್ಯ ಅಭಿಮಾನಿಗಳೂ ಶುಭ ಹಾರೈಸಿದ್ದಾರೆ.
2022ರ ಜುಲೈನಲ್ಲಿ ಕೃನಾಲ್ ಮತ್ತು ಪಂಖುರಿ ದಂಪತಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಹೆಸರು ‘ಕವಿರ್’ ಎಂದು ನಾಮಕರಣ ಮಾಡಿದ್ದರು.
ಸದ್ಯ ಐಪಿಎಲ್ ಕಣದಲ್ಲಿರುವ ಕೃನಾಲ್ ಪಾಂಡ್ಯ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ.