ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಫಿಲಿಪ್ ಸಾಲ್ಟ್ ಹಾಗೂ ಸುನಿಲ್ ನರೈನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ 16 ಓವರ್ನಲ್ಲೇ ಕೆಕೆಆರ್ 200 ರನ್ ಗಡಿ ದಾಟಿತು. ಅಂತಿಮವಾಗಿ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 261 ರನ್ ಸಿಡಿಸಿದೆ .
ಕೆಕೆಆರ್ ಪರ ಪಿಲಿಫ್ ಸಾಲ್ಟ್ ಹಾಗೂ ಸುನಿಲ್ ನರೈನ್ ಸ್ಫೋಟಕ ಆರಂಭ ನೀಡಿದರು. ಸುನಿಲ್ ನರೈನ್ ಕೇವಲ 32 ಎಸೆತದಲ್ಲಿ 71 ರನ್ ಸಿಡಿಸಿದರು. ಮೊದಲ ವಿಕೆಟ್ಗೆ ಈ ಜೋಡಿ ದಾಖಲೆಯ 138ರನ್ ಸಿಡಿಸಿತು. ಇತ್ತ ಸಾಲ್ಟ್ 37 ಎಸೆತದಲ್ಲಿ 75 ರನ್ ಸಿಡಿಸಿದರು. ವೆಂಕಟೇಶ್ ಅಯ್ಯರ್ ಅಬ್ಬರಿಸಿದರೆ, ರಸೆಲ್ 12 ಎಸೆದಲ್ಲಿ 24 ರನ್ ಸಿಡಿಸಿದರು.’
ನಾಯಕ ಶ್ರೇಯಸ್ ಅಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ ಹೋರಾಟ ಕೆಕೆಆರ್ ತಂಡದ ರನ್ 200ರ ಗಡಿ ದಾಟಿಸಿತು. ಶ್ರೇಯಸ್ 28 ರನ್ ಸಿಡಿಸಿ ಔಟಾದರು. ವೆಂಕೇಶ್ ಅಯ್ಯರ್ 39 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 261 ರನ್ ಸಿಡಿಸಿತು.