ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಎನ್ನಲಾದ ಪೆನ್ಡ್ರೈವ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಂತ್ರಸೆಯ ಕುಟುಂಬದವರೇ ರೇವಣ್ಣ ಕುಟುಂಬದ ಪರ ಮಾತನಾಡಿದ್ದಾರೆ.
ರೇವಣ್ಣ, ಪ್ರಜ್ವಲ್ ವಿರುದ್ಧ ದೂರು ನೀಡಿದ್ದ ಸಂತ್ರಸ್ತ ಮಹಿಳೆ ವಿರುದ್ಧವೇ ಆಕೆಯ ಗಂಡನ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಇಂದು ಹಾಸನದಲ್ಲಿ ಸಂತ್ರಸ್ತೆ ಗಂಡನ ತಾಯಿ ಗೌರಮ್ಮ ಶಿಲ್ಪ ಸುದ್ದಿಗೋಷ್ಠಿ ನಡೆಸಿದ್ದು, 5 ವರ್ಷದ ಹಿಂದೆ ಸುಮ್ನೆ ಇದ್ದು ದೂರು ನೀಡಿದ್ದಾರೆ.
ಭಾವನಿ ಅಮ್ಮ ನಮ್ಮ ಕುಟುಂಬಕ್ಕೆ ತುಂಬಾ ಸಹಾಯ ಮಾಡಿದ್ದಾರೆ. ಅವರು ನಮ್ಮ ಕುಟುಂಬದ ಜೊತೆ ಇದ್ದರು. ಹೆದರಿಸಿ ಇವರನ್ನ ಕಳೆದುಕೊಂಡು ಹೋಗಿ ದೂರು ಕೊಡಿಸಿದ್ದಾರೆ. ನಾವು ಶ್ರೀರಾಮಪುರದಲ್ಲಿ ಜೊತೆ ಒಟ್ಟಿಗೆ ಇದ್ವಿ. ಚುನಾವಣೆ ಸಮಯದಲ್ಲಿ ಗೌಡರ ಮನೆಗೆ ಕಪ್ಪು ಚುಕ್ಕೆ ತರಲು ಈ ಕೆಲಸ ಮಾಡಿದ್ದಾರೆ. ಇದೆಲ್ಲ ಸುಳ್ಳು ದೂರು. ರೇವಣ್ಣ ಕುಟುಂಬ ನಮಗೆ ಸಂಬಂಧಿಕರು ಎಂದು ರೇವಣ್ಣ ,ಪ್ರಜ್ವಲ್ ಪರ ಬ್ಯಾಟಿಂಗ್ ಮಾಡಿದ್ದಾರೆ.
No yaru yene helidru investigation agbeku,evaga election time alva adukke case close madoke nodthiddare,please ee vishya investigation agbeku