ಹೊಸದಿಗಂತ ವರದಿ, ಬೀದರ್:
ಪಾಪ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ತೋಟ್ಟಲಿನಲ್ಲಿ ಇದ್ದಾಗಿನಿಂದಲೇ ಸುಳ್ಳು ಮಾತಾಡಿದವರು. ಜನರೆದುರು ನೂರಾರು, ಸಾವಿರಾರು, ಲಕ್ಷಗಟ್ಟಲೆ, ಸುಳ್ಳುಗಾರ ಎಂದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದರೆ ತಪ್ಪೇನಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಅವರು ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಂದರೆ ಅವರಂತು ಅಪ್ಪಟ ಸುಳ್ಳುಗಾರ, ಈ ಕಡೆ ಹೇಳುವುದು ಒಂದು ಆ ಕಡೆ ಮಾಡುವುದು ಒಂದು ಇದು ಅವರ ಚಾಳಿ. ವೀರಶೈವ ಲಿಂಗಾಯತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಳ್ಳುವ ಅವರು ಅದು ಕೇವಲ ಖುರ್ಚಿ ಕೂಡಲಿಕ್ಕೆ ಮಾತ್ರ ಇಲ್ಲಿಯವರೆಗೂ ವಿರಶೈವ ಲಿಂಗಾಯತ ಸಮಾಜಕ್ಕೆ ಅವರ ಕೊಡುಗೆ ಶೂನ್ಯಕ್ಕೆ ಸಮಾನ ಎಂದು ಆರೋಪಿಸಿದರು.
ಸದಾ ಜನರಿಗೆ ಕೇಂದ್ರದ ರಾಜ್ಯಕ್ಕೆ ಕೊಡುಗೆ ಬಗ್ಗೆ ಶಬ್ದ ಮಾತನಾಡದ ಅವರು ಸದಾ ಸುಳ್ಳೇ ಹೇಳುವ ಮಹಾಪುರುಷ , ಐದು ದಶಕದ ಕಳೆದರೂ ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆ ಪೂರ್ಣಗೊಳಿಸಲಿಕ್ಕೆ ಆಗಲಿಲ್ಲ ಇವರಿಂದ ನಮಗೆ ಪಾಠ ಮಾಡುವ ಅವಶ್ಯಕತೆ ಇಲ್ಲ, ಅವರೊಬ್ಬ ಹೇಡಿ ರಾಜಕಾರಣಿ ನನ್ನ ಸಕ್ಕರೆ ಕಾರ್ಖಾನೆಗೆ ರಾಜ್ಯ ಸರ್ಕಾರದಿಂದ ನೋಟಿಸ್ ನೀಡಿದ್ದಾರೆ ಅವರಿಂದ ನಾನೆಂದೂ ಹೆದರುವ ಪ್ರಶ್ನೆಯೆ ಬರಲ್ಲ, ನಾನು ಸಿಎಂ ಆದ್ರೆ ಜಿಲ್ಲೆಯಲ್ಲಿ ನಿಮ್ಮ ಸಕ್ಕರೆ ಕಾರ್ಖಾನೆಗಳ ಅಧೋಗತಿಯ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಗುಡುಗಿದರು. ಈಶ್ವರ್ ಖಂಡ್ರೆ ಅವರಿಗೆ ತಾಕತ್ತಿದ್ದರೆ ಸ್ವತಃ ಚುನಾವಣೆಗೆ ನಿಲ್ಲಬೇಕಿತ್ತು ಧೃತರಾಷ್ಟ್ರನಂತೆ ಪುತ್ರ ವ್ಯಾಮೋಹದಿಂದ ಸೋಲಿನ ಪಟ್ಟ ತಪ್ಪಿಸಲು ಮಗನಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಫ್ರೀ, ಫ್ರೀ, ಕೋಟ್ಟು ಎಸ್.ಸಿ, ಎಸ್ಟಿ ಜನಾಂಗಕ್ಕೆ ಮಿಸಲು ಇಟ್ಟ ಹಣ ಕೂಡಾ ಲೂಟಿ ಮಾಡಿದೆ, ಇದೀಗ ಕೇಂದ್ರದಿಂದ ಹಣ ಬರಲಿಲ್ಲ ಎಂದು ಹೇಳುತ್ತಿದ್ದಾರೆ, ಕೇಂದ್ರದಿಂದ ಬಂದು ಬೇರೆ ಪರಿಹಾರ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಗೆ ಲೋಕಸಭೆ ಚುನಾವಣೆ ನಂತರ ಉಳಿಗಾಲವಿಲ್ಲ ಎಂದು ಹೇಳಿದರು.