ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ, ಕೇರಳ, ತಮಿಳುನಾಡು ತನ್ನದೇ ಆಗಿರುವ ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿದೆ. ಆದರೆ ಇಲ್ಲಿ ಹೋಗುವುದಕ್ಕೆ ತುಂಬಾ ಖರ್ಚು ಆಗುತ್ತದೆ ಎಂಬುದು ಅನೇಕರ ಚಿಂತೆ. ನಿಮ್ಮ ಚಿಂತೆ ದೂರ ಮಾಡೋಕೆ ಕೆಸ್‌ಡಿಟಿಸಿ (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಆಗ್ಗಾಗೆ ವಿಶೇಷ ಪ್ಯಾಕೇಜ್ಗಳನ್ನು ನೀಡುತ್ತದೆ.
ಇದೀಗ ಹೊಸ ವರ್ಷದ ಎರಡನೇ ವಾರ ವಿಶೇಷ ಪ್ಯಾಕೇಜ್ ಒಂದನ್ನು ಬಿಡುಗಡೆ ಮಾಡಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣಗಳಾದ ಮೈಸೂರು, ಊಟಿ ಮತ್ತು ಕೊಡೈಕೆನಾಲ್ ಪ್ರವಾಸ ಹೋಗಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶ.
ಈ ಪ್ಯಾಕೇಜ್ ಮೂಲಕ ವಿಶೇಷ ಸ್ಥಳಗಳನ್ನು ನೋಡಬಹುದು. ಒಂದು ವೇಳೆ ಈ ಪ್ಯಾಕೇಜ್ ಆಯ್ಕೆ ಮಾಡಿಕೊಂಡರೆ 20% ರಿಯಾಯಿತಿ ಇರುತ್ತದೆ. ಮೈಸೂರು, ಊಟಿ, ಕೊಡೈಕೆನಾಲ್‌ನ ಪ್ರಮುಖ ಆಕರ್ಷಣೀಯ ಸ್ಥಳಗಳಿಗೆ ಟ್ರಿಪ್ ಹೋಗಲಾಗುತ್ತದೆ. ಸುಸಜ್ಜಿತ ಡಿಲಕ್ಸ್ ಕೋಚ್ ಮೂಲಕ ಪ್ರಯಾಣ ಸಾಗಲಿದೆ. ಮೈಸೂರು-ಊಟಿ-ಕೊಡೈಕೆನಾಲ್ ಪ್ರವಾಸ ಪ್ಯಾಕೇಜ್ ಗೆ ಒಬ್ಬರಿಗೆ ತಲಾ ₹9,310 ರೂಪಾಯಿ ಇದೆ. ಹಿರಿಯ ನಾಗರಿಕರಿಗೆ ದರದಲ್ಲಿ ಶೇಕಡಾ 20ರಷ್ಟು ರಿಯಾಯಿತಿ ಇದೆ.

