ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಬಿ–ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಕಾರ್ಮಿಕರಿಗೆ 100ರಿಂದ 125 ದಿನಗಳವರೆಗೆ ಕೂಲಿ ದಿನಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಗ್ರಾಮೀಣ ಜನರಿಗೆ ನೇರ ಲಾಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ ತಮ್ಮ ಅಕ್ರಮಗಳು ಬಯಲಾಗುವ ಭಯದಿಂದಲೇ ಕಾಂಗ್ರೆಸ್ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಗ್ರಾಮ ಪಂಚಾಯತಿಗಳ ಅಧಿಕಾರ ಕಡಿತಗೊಳಿಸಲಾಗಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದರು. ಈ ಯೋಜನೆಯಡಿ ಮನೆಗಳಲ್ಲಿ ಕೆಲಸ ಇರುವ–ಇಲ್ಲದ ಮಾಹಿತಿ ಸಂಗ್ರಹಿಸುವುದು, ಅಭಿವೃದ್ಧಿ ಯೋಜನೆ ರೂಪಿಸುವುದು, ಅನುಷ್ಠಾನ ಹಾಗೂ ಕೂಲಿ ವಿತರಣೆ ಸೇರಿದಂತೆ ಎಲ್ಲಾ ಪ್ರಮುಖ ಅಧಿಕಾರಗಳು ಗ್ರಾಮ ಪಂಚಾಯತಿಗಳಲ್ಲೇ ಇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: FOOD | ಉತ್ತರ ಕರ್ನಾಟಕ ಸ್ಪೆಷಲ್ ಗಿರ್ಮಿಟ್ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ!
ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆಧಾರ್ ಸೀಡಿಂಗ್ ಮತ್ತು ಡಿಜಿಟಲೀಕರಣ ಅಳವಡಿಸಲಾಗಿದೆ. ಹಿಂದಿನ ಕೂಲಿ ಯೋಜನೆಗಳಲ್ಲಿ ನಡೆದ ಅವ್ಯವಹಾರಗಳೇ ಸಿಬಿಐ ತನಿಖೆಗೆ ಕಾರಣವಾಗಿದ್ದವು ಎಂದು ಅವರು ನೆನಪಿಸಿದರು. ಗ್ರಾಮ ಪಂಚಾಯತಿಗಳಿಗೆ ಸಂವಿಧಾನದ 73ನೇ ತಿದ್ದುಪಡಿ ಅನುಸಾರ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದರು.
ಯೋಜನೆಯ ಹೆಸರಿನಿಂದ ಗಾಂಧಿ ಹೆಸರು ಕೈಬಿಟ್ಟಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಗಾಂಧಿ ಮತ್ತು ರಾಮರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

