ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದು,ತೆಲುಗು ನಟಿ ರಶ್ಮಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.
ಸಖತ್ ಬೋಲ್ಡ್ ಆದ ಪೋಸ್ಟ್ ಇದಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಗಂಡು ಮಕ್ಕಳು ಒಳ್ಳೆಯವರೇ ಆಗಿದ್ದರೆ ವೇಶ್ಯಾವಾಟಿಕೆ ಅನ್ನೋದೇ ಇರುತ್ತಾ ಇರಲಿಲ್ಲ. ಬಡ ಮಹಿಳೆ ಹಸಿದಾಗ ಅವರ ಬಾಯಿಗೆ ಆಹಾರವನ್ನು ಹಾಕಬೇಕೇ ಹೊರೆತು ಖಾಸಗಿ ಅಂಗವನ್ನಲ್ಲ ಅನ್ನೋ ಸಾಲುಗಳನ್ನ ನಟಿ ರಶ್ಮಿ ಅವರು ಪೋಸ್ಟ್ ಮಾಡಿದ್ದಾರೆ.
ರಶ್ಮಿ ಅವರು ಮಾಡಿರುವ ಈ ಪೋಸ್ಟ್ ಖ್ಯಾತ ಲೇಖಕಿ, ಪ್ರೊಫೆಸರ್ ರಾಚೆಲ್ ಮೊರಾನ್ ಅವರು ಮಹಿಳೆಯರ ಬಗ್ಗೆ ಬರೆದ ಸಾಲುಗಳಾಗಿವೆ. ಈ ಕೋಟ್ ಅನ್ನು ಪೋಸ್ಟ್ ಮಾಡಿರುವ ರಶ್ಮಿ ಅವರು ನೆಟ್ಟಿಗರ ಗಮನ ಸೆಳೆದಿದ್ದಾರೆ.
ತೆಲುಗು ನಟಿ ರಶ್ಮಿ ಅವರು ಇನ್ಸ್‌ಸ್ಟಾಗ್ರಾಂ ಸ್ಟೇಟಸ್ನಲ್ಲಿ ಈ ಪೋಸ್ಟ್ ಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಅವರ ಕೇಸ್ ಬಗ್ಗೆ ಆಕ್ರೋಶ ಹೊರಹಾಕಿರುವ ಪೋಸ್ಟ್ ಇದಾಗಿದೆ ಎನ್ನಲಾಗಿದೆ.