ಚಾರ್ಜ್‌ ಲೈಟ್‌ ಬಳಸಿ ಹೆರಿಗೆ, ತಾಯಿ ಮಗು ಸಾವು! ಆಸ್ಪತ್ರೆ ಮುಂದೆ ಕುಟುಂಬದವರ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಗು ಮೃತಪಟ್ಟಿರುವ ಘಟನೆ ಮುಂಬೈನ ಭಾಂಡೂಪ್​ ಮುನ್ಸಿಪಲ್ ಆಸ್ಪತ್ರೆಯಲ್ಲಿ ನಡೆದಿದೆ.

ವಿದ್ಯುತ್​ ಇಲ್ಲದೆ ಹೆರಿಗೆ ಮಾಡಿಸಲು ವೈದ್ಯರು ಮುಂದಾಗಿದ್ದಾರೆ ಎಂದು ಮನೆಯವರು ದೂರಿದ್ದಾರೆ. ಸದ್ಯ ಬೃಹಾನ್​ಮುಂಬೈ​ ಮುನ್ಸಿಪಲ್​ ಕಾರ್ಪೋರೇಷನ್​ ತಾಯಿ-ಮಗುವಿನ ಸಾವಿನ ಪ್ರಕರಣವನ್ನು ತನಿಖೆ ಮಾಡುತ್ತಿದೆ.

ಏಪ್ರಿಲ್​ 29ರಂದು ಸಹೀದುನ್​ ಅನ್ಸಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಹೆರಿಕೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಏಪ್ರಿಲ್​ 30ರಂದು 12:30ಕ್ಕೆ ಹೆರಿಗೆಯಾಗಿದೆ. ಆದರೆ ಹೆರಿಗೆಯಾದ ಕೆಲ ಹೊತ್ತಿನಲ್ಲೇ ಮಗು ಸಾವನ್ನಪ್ಪಿದೆ. ಬಳಿಕ ತಾಯಿಯ ಆರೋಗ್ಯದಲ್ಲೂ ಏರುಪೇರು ಕಾಣಿಸಿಕೊಂಡಿದ್ದು, ಸಹೀದುನ್​ನನ್ನು ಎಲ್​ಟಿಎಂಜಿ ಸಿಯಾನ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಆದರೆ ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.

ಮಹಿಳೆ ಸಹೀದುನ್​ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. 9 ತಿಂಗಳ ಗರ್ಭಿಣಿಯಾದಾಗ ಉತ್ತಮ ಆರೋಗ ಹೊಂದಿದ್ದಳು. ಆದರೆ ಹೆರಿಗೆ ಆಸ್ಪತ್ರೆಗೆ ಕರೆ ತಂದ ಬಳಿಕ ಹೇಗೆ ಮೃತಪಟ್ಟಿದ್ದಾರೆ ಎಂದು ಕುಟುಂಬದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!