ಸೆಖೆಗೆ ಮಹಡಿ ಮೇಲೆ ಮಲಗಿದ್ದ ಶಿಕ್ಷಕ ಇದ್ದಕ್ಕಿದ್ದಂತೆಯೇ ಸಾವು! ಕಾರಣ ಬೇರೆಯೇ ಇದೆ..

ಹೊಸದಿಗಂತ ವರದಿ ಮಂಗಳೂರು:

ಅತಿಯಾದ ಸೆಖೆಗೆ ಬೇಸತ್ತಿದ್ದ ಶಿಕ್ಷಕರೊಬ್ಬರು ಮನೆಯ ಮಹಡಿ ಮೇಲೆ ಮಲಗಿದ್ದು, ಬೆಳಗ್ಗೆ ವೇಳೆಗೆ ಮೃತಪಟ್ಟಿದ್ದಾರೆ.

ಈ ಘಟನೆ ಉಡುಪಿಯಅಜೆಕಾರು ಆಶ್ರಯನಗರದಲ್ಲಿ ನಡೆದಿದೆ. ಸುಂದರ ನಾಯ್ಕ್ ( 55) ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.

ರಾತ್ರಿ ಸುಮಾರು 10:30 ರ ವೇಳೆಗೆ ಟೆರೇಸ್ ಮೇಲೆ ಮಲಗಲು ತೆರಳಿದ್ದರು. ಬೆಳಿಗ್ಗೆ 6:30 ವೇಳೆಗೆ ಗಮನಿಸಿದಾಗ ಟೆರೇಸ್ ಮೇಲಿಂದ ಕೆಳಗೆ ಬಿದ್ದಿರೋದು ಬೆಳಕಿಗೆ ಬಂದಿದೆ.

ಗಾಢ ನಿದ್ರೆಯಲ್ಲಿ ಆಯತಪ್ಪಿ ಟೆರೇಸ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಹೇಳಲಾಗಿದೆ. ವಿಷಯ ತಿಳಿದು ಕುಟುಂಬದವರು ಶಾಕ್‌ನಲ್ಲಿದ್ದು, ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!