ಪೋಷಕರ ಒತ್ತಡ ಇಲ್ಲ, ಮೊಬೈಲ್‌ ಬಳಸಿಲ್ಲ: ಟಾಪರ್‌ ಅಂಕಿತಾ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು ಔಟ್‌ ಆಫ್‌ ಔಟ್‌ ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ನಿವಾಸಿ ಆಗಿರುವ ವಿದ್ಯಾರ್ಥಿನಿ ಅಂಕಿತಾ ಮೊಬೈಲ್‌ ಬಳಸೇ ಇಲ್ವಂತೆ.. ಇನ್ನೇನು ಹೇಳ್ತಾರೆ ಕೇಳಿ..

ಫಸ್ಟ್‌ ಬಂದಿದ್ದು ಖುಷಿ ಆಗ್ತಿದೆ. ನನಗೆ ಎಷ್ಟು ಮಾರ್ಕ್ಟ್‌ ತಗಿಬೇಕು ಅಂತ ಐಡ್ಯಾ ಇರಲಿಲ್ಲ. ಪೋಷಕರು ಒಂದು ದಿನವೂ ಒತ್ತಡ ಹಾಕಿಲ್ಲ. ನಾನು ಹಾಸ್ಟೆಲ್‌ನಲ್ಲಿ ಓದಿದೆ. ಅದಕ್ಕಾಗಿ ಮೊಬೈಲ್‌ ಮುಟ್ಟಿಲ್ಲ. ಪಾಠಕ್ಕೆ ಸಂಬಂಧಿಸಿದಂತೆ ಏನಾದರೂ ಬೇಕಿದ್ದರೆ ಮಾತ್ರ ಮೊಬೈಲ್‌ ಬಳಕೆ ಮಾಡುತ್ತಿದ್ದೆ. ಐಎಎಸ್‌ ಅಧಿಕಾರಿಯಾಗುವ ಕನಸು ಕಂಡಿದ್ದೇನೆ. ಕಷ್ಟಪಟ್ಟಿದ್ದಕ್ಕೆ ಬೆಲೆ ಸಿಕ್ಕಿದೆ. ಪೋಷಕರು ಖುಷಿಯಾಗಿದ್ದಾರೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!