ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ಲವ್, ಬ್ರೇಕಪ್ ಸಾಮಾನ್ಯ.ಯಾರ ಹೆಸರು ಯಾವ ಸ್ಟಾರ್ ಜತೆ ಥಳಕು ಹಾಕಿಕೊಳ್ಳುತ್ತದೆಯೋ ಯಾವಾಗ ಸುದ್ದಿ ಮುನ್ನೆಲೆಗೆ ಬರಲು ಪ್ರಾರಂಭಿಸುತ್ತದೆಯೋ ಎಂಬುದು ಯಾರಿಗೂ ತಿಳಿದಿಲ್ಲ.
ಪ್ರಸ್ತುತ, ಬಾಲಿವುಡ್‌ನ ಅಂಗಳದಲ್ಲಿ ಕೇಳಿಬರುತ್ತಿದ್ದ ಹೆಸರು ನಟರಾದ ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್ . ಹಾಗಿದ್ರೆ ಅನನ್ಯಾ ಪಾಂಡೆ , ಆದಿತ್ಯ ಲವ್ ಏನಾಯಿತು?
ಹೌದು, ಬಾಲಿವುಡ್‌ನಲ್ಲಿ ಅನನ್ಯಾ ಪಾಂಡೆ , ಆದಿತ್ಯ ಲವ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಕುರಿತು ಬಹಿರಂಗವಾಗಿ ಮಾತನಾಡದಿದ್ದರೂ, ಅನೇಕ ಸಂದರ್ಭಗಳಲ್ಲಿ ಅಭಿಮಾನಿಗಳಿಗೆ ಅವರ ಸಂಬಂಧದ ಬಗ್ಗೆ ಸುಳಿವು ಸಿಕ್ಕಿತ್ತು.
ಆದ್ರೆ ಇತ್ತೀಚೆಗಷ್ಟೇ ಆದಿತ್ಯ ಮತ್ತು ಅನನ್ಯಾ ಬ್ರೇಕಪ್ ಸುದ್ದಿ ಬೆಳಕಿಗೆ ಬಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಈಗ ಆದಿತ್ಯ ಹೆಸರು ಸಾರಾಗೆ ಜೋಡಣೆಯಾಗಿದೆ.
ಬಾಲಿವುಡ್ ನಿರ್ದೇಶಕ ಅನುರಾಗ್ ಬಸು ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬಾಲಿವುಡ್ ತಾರೆಯರು ಅನುರಾಗ್ ಅವರ ಪಾರ್ಟಿಯಲ್ಲಿ ಭಾಗವಹಿಸಿದ್ದರು, ಆದರೆ, ಎಲ್ಲರ ಗಮನವು ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್ ಅವರತ್ತ ಸೆಳೆಯಿತು. ಅನುರಾಗ್ ಪಾರ್ಟಿಯ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ನಿರ್ದೇಶಕರು ತಮ್ಮ ಅತಿಥಿಗಳಿಗೆ ಹುಟ್ಟುಹಬ್ಬದ ಕೇಕ್ ನೀಡಲು ಸಮೀಪಿಸುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ, ಈ ಚಿತ್ರದಲ್ಲಿ ಸಾರಾ ಮತ್ತು ಆದಿತ್ಯ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಹೊರಬಿದ್ದ ಕೂಡಲೇ ಇಬ್ಬರ ಬಗ್ಗೆ ಚರ್ಚೆಗಳು ಬಿಸಿಯಾಗಿವೆ.