ದಿಗಂತ ವರದಿ ಹುಬ್ಬಳ್ಳಿ:
ಕಾಂಗ್ರೆಸ್ ಅಧಿಕಾರ ಹಿಡಿಯಲು ದೇಶವನ್ನು ಒಡೆಯಲು ಸಹ ಹೇಸಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಶ್ಯಾಮ್ ಪಿತ್ರೊಡಾ ನೀಡಿದ್ದಾರೆ ಎನ್ನಲಾದ ಜನಾಂಗಿ ದ್ವೇಷದ ಹೇಳಿಕೆ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಐಎನ್ ಡಿಐಎ ಒಕ್ಕೂಟಕ್ಕೆ ದೇಶದ ಒಗ್ಗಟ್ಟಾಗಿರುವುದು ಇಷ್ಟವಿಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ ದಕ್ಷಿಣ ಭಾರತ ಬೇರೆಯಾಗಬೇಕು, ಸ್ಟಾಲಿನ್ ಅವರು ಡ್ರಾವಿಡ್ ಅವರು ಬೇರೆ ಹಾಗೂ ಶ್ಯಾಮ್ ಪಿತ್ರೋಡಾ ಅವರು ಮನುಷ್ಯನ ಬಣ್ಣದ ಮೇಲೆ ಹೇಳಿಕೆ ನೀಡುತ್ತಿದ್ದಾರೆ. ಇದೆಲ್ಲವೂ ನೋಡಿದರೆ ಕಾಂಗ್ರೆಸ್ ಗೆ ದೇಶ ಒಗ್ಗಟ್ಟಿನಿಂದ ಇರುವುದು ಇಷ್ಟವಿಲ್ಲ ಎಂದು ಕಿಡಿಕಾರಿದರು.