CINE | ಡಿ ಬಾಸ್ ನಟನೆಯ ‘ಡೆವಿಲ್’ ಮೇಕಿಂಗ್ ವಿಡಿಯೋ ರಿಲೀಸ್, ಅಭಿಮಾನಿಗಳ ದಿಲ್ಕುಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಮೊದಲ ಟೀಸರ್ ವೈರಲ್ ಆಗಿದ್ದು, ಈಗ ಅಕ್ಷಯ ತೃತೀಯ (ಮೇ 10) ದಿನ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ.

ಅಭಿಮಾನಿಗಳು ಈ ಮೇಕಿಂಗ್ ವಿಡಿಯೋ ನೋಡಿ ಸಖತ್ ಥ್ರಿಲ್ ಆಗಿದ್ದಾರೆ.

“ಡೆವಿಲ್ ” ಚಿತ್ರಕ್ಕೆ ಪ್ರಕಾಶ್ ವೀರ್ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಕಾಶ್ ವೀರ್ ಅವರು ವಂಶಿ ಮತ್ತು ಮಿಲನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ದರ್ಶನ್ ಅವರೊಂದಿಗೆ ಈ ಹಿಂದೆ ತಾರಕ್ ಸಿನಿಮಾ ಚಿತ್ರೀಕರಣ ಮಾಡಿದ್ದರು. ಈ ಚಿತ್ರವು 2017 ರಲ್ಲಿ ಬಿಡುಗಡೆಯಾಗಿತ್ತು. ದರ್ಶನ್ ಜೊತೆ ಇದೀಗ ಎರಡನೇ ಬಾರಿ ಚಿತ್ರ ಮಾಡಲು ಜೊತೆಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!