ಹೊಸದಿಗಂತ ವರದಿ ಮಂಗಳೂರು:
ಮಂಗಳೂರಿನಲ್ಲಿ ಇಂದು ಹಲವು ಪ್ರಮುಖ ಕಾರ್ಯಕ್ರಮಗಳು ನಡೆಯುತ್ತಿರುವ ಕಾರಣ ಸಂಚಾರ ದಟ್ಟಣೆ ಉಂಟಾಗಲಿದೆ. ಈ ಕಾರಣದಿಂದ ಹಲವು ರಸ್ತೆಗಳಲ್ಲಿ ಓಡಾಟ ಸಮಸ್ಯೆಯಾಗಬಹುದು. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಇಂದು ಸಂಜೆ ಗಣ್ಯರು ಮಂಗಳೂರು ಅತ್ತಾವರದಲ್ಲಿರುವ ಹೋಟೆಲ್ ಅವಾತಾರ್ ನಡೆಯಲಿರುವ ಕರಾವಳಿ ಕರ್ನಾಟಕ ಪ್ರವಾಸೋದ್ಯಾಮ ಸಮಾವೇಶ, ಪಿಲಿಕುಲದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭ, ನರಿಂಗಾನ ಹಾಗೂ ಅಂಬ್ಲಮೊಗರುಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಮಾನ್ಯರುಗಳು ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದು.
ಸಾರ್ವಜನಿಕರು ಸುಗಮ ಸಂಚಾರ ದೃಷ್ಟಿಯಿಂದ ತುರ್ತು ಸಂಧರ್ಭದಲ್ಲಿ ಹೊರತುಪಡಿಸಿ ಕೆಳಕಂಡ ಮಾರ್ಗದಲ್ಲಿ ಬಾರದೇ ಅದಷ್ಟು ಬದಲಿ ಮಾರ್ಗ ಉಪಯೋಗಿಸುವಂತೆ ಕೋರಿದೆ.
ಇದನ್ನೂ ಓದಿ: ಡಿವೋರ್ಸ್ ಆದವಳಿಗೆ ಬಾಳು ಕೊಡ್ತೀನಿ ಎಂದು ಬಂದು ಜೀವನವನ್ನೇ ಬರ್ಬಾದ್ ಮಾಡಿ ಹೋದ!
ಸಂಚಾರ ದಟ್ಟಣೆಯಾಗುವ ಮಾರ್ಗಗಳು:
ಕೆಂಜಾರು ಜಂಕ್ಷನ್ – ಮರವೂರು – ಕಾವೂರು – ಬೋಂದೆಲ್ – ಪದವಿನಂಗಡಿ – ಮೇರಿಹಿಲ್ – ಯೆಯ್ಯಾಡಿ – ಕೆ.ಪಿ.ಟಿ.ವೃತ್ತ – ಬಟ್ಟಗುಡ್ಡೆ – ಕದ್ರಿ ಕಂಬಳ – ಭಾರತ್ ಬೀಡಿ ಜಂಕ್ಷನ್ – ಬಂಟ್ಸ್ ಹಾಸ್ಟೆಲ್ – ಪಿ.ವಿ.ಎಸ್ – ನವಭಾರತ್ ವೃತ್ತ – ಡಾ| ಅಂಬೇಡ್ಕರ್ ಜಂಕ್ಷನ್ – ಹಂಪನ್ ಕಟ್ಟೆ – ಕೈರಾಲಿ ಜಂಕ್ಷನ್ – ಅತ್ತಾವರ ಕಟ್ಟೆ – ಅವತಾರ್ ಹೋಟೆಲ್ ಎದುರಿನ ರಸ್ತೆ.
ಪದವುಜಂಕ್ಷನ್ – ನಂತೂರು ವೃತ್ತ – ಪಂಪುವೆಲ್ – ಎಕ್ಕೂರು – ಜಪ್ಪಿನಮೊಗರು – ಕಲ್ಲಾಪು – ತೊಕ್ಕೊಟ್ಟು – ಕುತ್ತಾರ್‌ಪದವು – ದೇರಳಕಟ್ಟೆ – ನಾಟೆಕಲ್ – ಮಂಗಳಾಂತಿ – ಕಲ್ಕಟ – ಮಂಜನಾಡಿ – ನರಿಂಗಾನ.
ಕುತ್ತಾರ್‌ಪದವು – ಕೊರಗಜ್ಜನಕಟ್ಟೆ – ಉಳಿಯ – ಅಂಬ್ಲಮೊಗರು – ಮದಕ ಜಂಕ್ಷನ್
ಕೆಪಿ.ಟಿ.ಜಂಕ್ಷನ್ – ಕೊಟ್ಟಾರಚೌಕಿ – ಕೊಡಿಕಲ್ ಕ್ರಾಸ್ – ಕೂಳೂರು – ಕೆ.ಐ.ಓ.ಸಿ.ಎಲ್ ಜಂಕ್ಷನ್ – ತಣ್ಣೀರುಬಾವಿ – ಬ್ಲೂಪ್ಲ್ಯಾಗ್ ಬೀಚ್. ಮೇಲೆ ತಿಳಿಸಿರುವ ಮಾರ್ಗದಲ್ಲಿ ಸದರಿ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡತಕ್ಕುದಲ್ಲ. ಮಾನ್ಯರು ಸಂಚರಿಸುವ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಯಾವುದೇ ವಾಹನಗಳು ಸಂಚರಿಸತಕ್ಕುದಲ್ಲ ಎಂದು ತಿಳಿಸಲಾಗಿದೆ.

