ಭಾರತದಲ್ಲಿ ಮೊದಲ ಮುಸ್ಲಿಂ ಪ್ರಧಾನಿ ಹಿಜಾಬ್ ಧರಿಸಿದ ಮಹಿಳೆಯಾಗಿರಬೇಕು: ಮನದ ಆಸೆ ತೆರೆದಿಟ್ಟ ಓವೈಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮೊದಲ ಮುಸ್ಲಿಂ ಪ್ರಧಾನಿ ಹಿಜಾಬ್‌ನಲ್ಲಿನ ಮಹಿಳೆಯಾಗಲಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ AIMIM ನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ‘ಭಾರತದಲ್ಲಿ ಮೊದಲ ಮುಸ್ಲಿಂ ಪ್ರಧಾನಿ ಹಿಜಾಬ್ ಧರಿಸಿದ ಮಹಿಳೆಯಾಗಿರಬೇಕು ಎಂದು ನನ್ನ ಭಾವನೆ.ಆದರೆ ನನ್ನ ನಂಬಿಕೆ ಎಂದರೆ ಮುಂದೊಂದು ದಿನ ಈ ಮಹಾನ್ ದೇಶಕ್ಕೆ ಹಿಜಾಬ್ ಧರಿಸಿದ ಮಹಿಳೆಯೊಬ್ಬರು ಮೊದಲ ಮುಸ್ಲಿಂ ಪ್ರಧಾನಿಯಾಗಲಿದ್ದಾರೆ. ಆದರೆ ಅದನ್ನು ನಾನು ನೋಡಲು ನಾನು ಇರುತ್ತೇನೆ ಎಂದು ನಾನು ನನಗನ್ನಿಸುತ್ತಿಲ್ಲ. ಆದರೆ ಖಂಡಿತಾ ಅದು ಆಗುತ್ತದೆ ಎಂದು ಓವೈಸಿ ಹೇಳಿದರು.

ಭಾರತದಲ್ಲಿ ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯವಾಗಿ AIMIM ಇರಲಿದೆ. ನಮ್ಮದು ಈಗ ಸಣ್ಣ ಪಕ್ಷ. ಮುಂದೊಂದು ದಿನ ನಮ್ಮ ಪಕ್ಷ ವಿಸ್ತರಣೆಯಾಗಲಿದೆ. ಪ್ರಸ್ತುತ ನಮ್ಮ ಮುಂದೆ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆ ಇಲ್ಲ. ಈ ಚುನಾವಣೆಯಲ್ಲಿನ ಪ್ರಮುಖ ಸಮಸ್ಯೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮುಸ್ಲಿಂ ವಿರೋಧಿ ಮಾತುಗಳು ಮತ್ತು ಇತರ ವಿಷಯಗಳ ಬಗ್ಗೆ ದೇಶದ ಜನರಲ್ಲಿ ಮನವರಿಕೆ ಮಾಡಲು ಬಯಸುತ್ತೇವೆ ಎಂದರು.

ನಮ್ಮ ಪಕ್ಷವು ಮುಸ್ಲಿಮರು, ಹಿಂದುಳಿದ ವರ್ಗಗಳು ಮತ್ತು ಇತರ ಅಲ್ಪಸಂಖ್ಯಾತರ ಗುಂಪನ್ನು ಒಟ್ಟುಗೂಡಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಉತ್ಸಾಹಭರಿತ ಹೋರಾಟವನ್ನು ನಡೆಸುತ್ತಿದೆ, ಆದರೆ ಇದು ಪ್ರತಿಪಕ್ಷ INDIA ಮೈತ್ರಿಕೂಟದ ಭಾಗವಾಗಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!