ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ (INDIA) ಒಕ್ಕೂಟ ಗೆಲುವು ಸಿಕ್ಕರೆ ಫಲಿತಾಂಶದ ಮರುದಿನವೇ ನಾನು ಜೈಲಿನಿಂದ ಹೊರಬರುತ್ತೇನೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ತಿಹಾರ್‌ನಲ್ಲಿರುವ ನನ್ನ ಸೆಲ್‌ನಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳಿದ್ದವು. ಆ ವಿಡಿಯೋಗಳನ್ನು 13 ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದರು. ಸಿಸಿಟಿವಿ ವಿಡಿಯೋಗಳನ್ನು ಪ್ರಧಾನಮಂತ್ರಿ ಕಚೇರಿಗೆ ನೀಡಲಾಗಿದೆ. ಮೋದಿ ಅವರು ನನ್ನ ಮೇಲೆ ನಿಗಾ ಇಡುತ್ತಿದ್ದಾರೆ. ಮೋದಿಯವರಿಗೆ ನನ್ನ ಮೇಲೆ ಯಾವ ದ್ವೇಷವಿದೆ ಗೊತ್ತಿಲ್ಲ ಎಂದು ಕೇಜ್ರಿವಾಲ್ ದೂರಿದರು.
ಪ್ರಧಾನಿ ಮೋದಿ ಕೇಜ್ರಿವಾಲ್ ಖಿನ್ನತೆಗೆ ಒಳಗಾಗಿದ್ದಾರಾ ಇಲ್ಲವಾ ಎಂದು ನೋಡಲು ಬಯಸಿದ್ದರು. ಕೇಜ್ರಿವಾಲ್ ಖಿನ್ನತೆಗೆ ಒಳಗಾಗಿಲ್ಲ. ನನಗೆ ಭಗವಾನ್ ಹನುಮಂತನ ಆಶೀರ್ವಾದವಿದೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಕೇಜ್ರಿವಾಲ್ ಈ ರೀತಿ ಒಡೆದು ಹೋಗುತ್ತಾನೆ ಎಂದು ಅವರು ಭಾವಿಸುತ್ತಾರೆ. ಆದರೆ ಅದು ಆಗುವುದಿಲ್ಲ ಎಂದರು.
ಜೂನ್ 2 ರಂದು ತಿಹಾರ್ ಜೈಲಿಗೆ ಹೋಗುತ್ತೇನೆ. ನಾನು ಜೂನ್ 4 ರಂದು ಜೈಲಿನೊಳಗೆ ಚುನಾವಣಾ ಫಲಿತಾಂಶಗಳನ್ನು ನೋಡುತ್ತೇನೆ. ನಾನು ಕಷ್ಟಪಟ್ಟು ಕೆಲಸ ಮಾಡಿದರೆ, ಇಂಡಿಯಾ ಬ್ಲಾಕ್ ಗೆದ್ದರೆ ನಾನು ಮತ್ತೆ ಜೂನ್ 5 ರಂದು ಹೊರಬರುತ್ತೇನೆ. ಆದರೆ ನಾವು ಈಗ ಕಷ್ಟಪಟ್ಟು ಕೆಲಸ ಮಾಡದಿದ್ದರೆ ನಾವು ಯಾವಾಗ ಮತ್ತೆ ಭೇಟಿಯಾಗಬಹುದು ಎಂದು ನನಗೆ ತಿಳಿದಿಲ್ಲ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದಿರುವ ಅರವಿಂದ್ ಕೇಜ್ರಿವಾಲ್ ಜೂನ್ 1 ರಂದು ಅವರ ಜಾಮೀನು ಅವಧಿ ಅಂತ್ಯವಾಗಲಿದ್ದು, ಜೂನ್ 2 ರಂದು ಜೈಲಿಗೆ ಮರಳಬೇಕಿದೆ.