KIDS SPL | ಮನೆಯಲ್ಲೇ ಮಾಡಿ ಕೊಡಿ ಪುಟಾಣಿಗಳು ಇಷ್ಟಪಟ್ಟು ತಿನ್ನುವ ಚೀಸ್ ಕುಕೀಸ್, ಇಲ್ಲಿದೆ ರೆಸಿಪಿ

ಬೇಕಾಗುವ ಸಾಮಗ್ರಿಗಳು:

2 ಟೇಬಲ್ ಸ್ಪೂನ್ ತುರಿದ ಚೀಸ್
¾ ಕಪ್-ಬೆಣ್ಣೆ
ಚಿಟಿಕೆ-ಖಾರದ ಪುಡಿ
ಚಿಟಿಕೆ-ಉಪ್ಪು
1 ಕಪ್-ಮೈದಾ

ಮೊದಲು ಒಂದು ಬೌಲ್ ಗೆ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಕ್ರೀಂನ ಹದಕ್ಕೆ ಬರಲಿ. ನಂತರ ಚೀಸ್, ಉಪ್ಪು ಮತ್ತು ಮೆಣಸು ಸೇರಿಸಿ ಮತ್ತು ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣಕ್ಕೆ ಮೈದಾ ಹಿಟ್ಟು ಸೇರಿಸಿ ಚೆನ್ನಾಗಿ ಕಲಸಿ ತಟ್ಟೆಯನ್ನು ಮುಚ್ಚಿ 15 ನಿಮಿಷ ಫ್ರಿಜ್ ನಲ್ಲಿಡಿ.
ನಂತರ ಅದನ್ನು ಹೊರತೆಗೆದು, ಚಪಾತಿ ಮಣೆಯ ಮೇಲೆ ಸ್ವಲ್ಪ ಮೈದಾ ಹಿಟ್ಟು ಉದುರಿಸಿ ಸ್ವಲ್ಪ ದಪ್ಪಕ್ಕೆ ಲಟ್ಟಿಸಿಕೊಳ್ಳಿ. ತೀರಾ ತೆಳು ಮಾಡಬೇಡಿ.

ನಂತರ ಕುಕ್ಕಿ ಕಟರ್ ಅಥವಾ ವೃತ್ತಾಕಾರದ ಬೌಲ್ ನ ಸಹಾಯದಿಂದ ಲಟ್ಟಿಸಿಕೊಂಡ ಚಪಾತಿಯನ್ನು ವೃತ್ತಾಕಾರದಲ್ಲಿ ಕುಕ್ಕಿಸ್ ರೀತಿ ಕತ್ತರಿಸಿಕೊಳ್ಳಿ.

ಬೇಕಿಂಗ್ ಟ್ರೇ ಗೆ ತುಪ್ಪ ಸವರಿ ಅದನ್ನು ಒವೆನ್ ನಲ್ಲಿ ಪ್ರಿ ಹೀಟ್ ಮಾಡಿಕೊಂಡು ನಂತರ ಕುಕ್ಕಿಸ್ ಅನ್ನು ಅದರ ಮೇಲೆ ಇಟ್ಟು 15 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ. ಇದನ್ನು ಒಂದು ಡಬ್ಬದಲ್ಲಿ ತುಂಬಿಸಿ ಕೂಡ ಶೇಖರಣೆ ಮಾಡಬಹುದು. ಈ ರೀತಿ ಮಾಡಿದರೆ ರುಚಿಯಾದ ಚೀಸ್ ಕುಕೀಸ್ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!