ಬೇಕಾಗುವ ಪದಾರ್ಥಗಳು:
1 ಕಪ್ ಪಾಸ್ತಾ
1 ಚಮಚ ಬೆಳ್ಳುಳ್ಳಿ
1/2 ಟೀ ಚಮಚ ಶುಂಠಿ
1 ಟೊಮ್ಯಾಟೋ
2 ಈರುಳ್ಳಿ
1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
1 ಟೀ ಸ್ಪೂನ್ ಜೀರಿಗೆ ಪುಡಿ,
1/2 ಟೀ ಸ್ಪೂನ್ ಕಸೂರಿ ಮೇಥಿ
2 ಕಪ್ ಹಾಲು
2 ಚಮಚ ಎಣ್ಣೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಬಾಣಲೆಗೆ ಸ್ವಲ್ಪ ಉಪ್ಪು, 4-5 ಸ್ಪೂನ್ ಎಣ್ಣೆ, ಪಾಸ್ತಾ ಮತ್ತು ನೀರು ಸೇರಿಸಿ ಬೇಯಿಸಿ. ಪಾಸ್ತಾ ಬೆಂದ ನಂತ್ರ ಅದರಲ್ಲಿರುವ ನೀರನ್ನು ಬಸಿದು ಪಕ್ಕಕ್ಕಿಡಿ.
ಇನ್ನೊಂದು ಪ್ಯಾನ್ ನಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಿ. ನಂತ್ರ ಈರುಳ್ಳಿ, ಟೊಮೆಟೊ, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಪ್ರೈ ಮಾಡಿ.
ಅದೇ ಪ್ಯಾನ್ ಗೆ ಎಣ್ಣೆ, ರುಬ್ಬಿದ ಮಿಶ್ರಣ ಹಾಗೂ ಉಪ್ಪನ್ನು ಹಾಕಿ ಬೇಯಿಸಿ. ನಂತರ ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಜೀರಿಗೆ ಹಾಕಿ ಚೆನ್ನಾಗಿ ಫ್ರೈ ಮಾಡಿ.
ನಂತರ ಇದಕ್ಕೆ ಹಾಲನ್ನು ಹಾಕಿ ಮಿಶ್ರಣ ದಪ್ಪಗಾಗುವವರೆಗೆ ಬೇಯಿಸಿ. ಹಾಲಿನ ಜೊತೆ ಮಸಾಲೆ ಸರಿಯಾಗಿ ಬೆಂದ ನಂತರ ಅದಕ್ಕೆ ಪಾಸ್ತಾ ಹಾಕಿ ಮಿಕ್ಸ್ ಮಾಡಿ. ರುಚಿಕರವಾದ ಪಾಸ್ತಾ ಸವಿಯಲು ಸಿದ್ದ.