ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯೊಂದರಲ್ಲಿ ಬೆಂಕಿ ನಂದಿಸಲು ತೆರಳಿದ್ದ ಅಧಿಕಾರಿ ಬೆಂಕಿಯಲ್ಲಿ ಬೆಂದು ಹೋದ ಘಟನೆ ಬಿಹಾರದ ಸಿವಾನ್ನಲ್ಲಿ ನಡೆದಿದೆ.
ಮನೆಯಲ್ಲಿದ್ದ ಯಂತ್ರಕ್ಕೆ ಬೆಂಕಿ ಹೊತ್ತಿ ಎಲ್ಲೆಡೆ ವ್ಯಾಪಿಸಿತ್ತು, ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಬೆಂಕಿ ನಂದಿಸಲು ಆಗಮಿಸಿದ್ದಾರೆ. ಹವಾಲ್ದಾರ್ ರವಿಕಾಂತ್ ಮಂಡಲ್ (40) ಮನೆಯ ಮೇಲ್ಛಾವಣಿಯ ಮೇಲೆ ಹತ್ತಿ ಬೆಂಕಿ ನಂದಿಸಲು ಆರಂಭಿಸಿದ್ದರು.
ನೀರನ್ನು ಫೋರ್ಸ್‌ನಲ್ಲಿ ಬಿಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆಯೇ ನೀರು ಖಾಲಿಯಾಗಿದ್ದು, ಬೆಂಕಿ ನಂದಿಸಲು ಆಗಲೇ ಇಲ್ಲ. ಭಾರೀ ಬೆಂಕಿಯಿಂದಾಗಿ ಛಾವಣಿ ಕುಸಿದಿದೆ. ರವಿಕಾಂತನಿಗೆ ಪ್ರಜ್ಞೆ ಬರುವಷ್ಟರಲ್ಲಿ ಅವರೂ ಉರಿಯುವ ಬೆಂಕಿಗೆ ಬಿದ್ದಿದ್ದರು. ಜ್ವಾಲೆಯು ಎಷ್ಟು ಪ್ರಬಲವಾಗಿದೆಯೆಂದರೆ ರವಿಕಾಂತ್ ತೀವ್ರವಾಗಿ ಸುಟ್ಟುಹೋದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರುವಷ್ಟರಲ್ಲಿ ರವಿಕಾಂತ್ ಮೃತಪಟ್ಟಿದ್ದಾರೆ.