ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಗೇಮ್ ಆಫ್ ಥ್ರೊನ್ಸ್’ನ ಪ್ರೀಕ್ವೆಲ್ ಬಿಡುಗಡೆ ಆಗುತ್ತದೆಂದು ಘೋಷಿಸಲಾಗಿತ್ತು. ಅಂತೆಯೇ 2022ರ ಆಗಸ್ಟ್ ತಿಂಗಳಲ್ಲಿ ‘ಗೇಮ್ ಆಫ್ ಥ್ರೋನ್ಸ್’ನ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ ಮೊದಲ ಸೀಸನ್ ಬಿಡುಗಡೆ ಆಗಿತ್ತು.
ಮೊದಲ ಸೀಸನ್ನಲ್ಲಿಯೇ ಗಮನ ಸೆಳೆದಿದ್ದ ‘ಹೌಸ್ ಆಫ್ ದಿ ಡ್ರ್ಯಾಗನ್’ ಎರಡನೇ ಸೀಸನ್ ಎರಡು ವರ್ಷಗಳ ಬಳಿಕ ಬಿಡುಗಡೆ ಆಗಲಿದೆ.
ಹೌಸ್ ಆಫ್ ದಿ ಡ್ರಾಗನ್ ಸರಣಿಯ ಎರಡನೇ ಸೀಸನ್‌ನ ಟ್ರೇಲರ್ ಅನ್ನು ಬಿಡುಗಡೆ ದಿನಾಂಕದೊಂದಿಗೆ ಬಿಡುಗಡೆ ಮಾಡಲಾಗಿದೆ. ಡ್ರ್ಯಾಗನ್ ಹೌಸ್‌ನ ಮೊದಲ ಸೀಸನ್ ಪಾತ್ರಗಳನ್ನು ಪರಿಚಯಿಸಲು ಮತ್ತು ಅವರ ವ್ಯಕ್ತಿತ್ವವನ್ನು ಸ್ಪಷ್ಟಪಡಿಸಲು ಹೆಚ್ಚಿನ ಒತ್ತು ನೀಡಿದೆ.
ಆದರೆ ಸೀಸನ್ 2 ರಲ್ಲಿ ಅಸಲಿ ಯುದ್ಧ ಶುರುವಾಗಿದೆ. ಅದೂ ಕಥೆ ನಡೆಯುವ ಪ್ರದೇಶದ ಅತಿ ದೊಡ್ಡ ಕುಟುಂಬವಾದ ಟಾಗೇರಿಯನ್ಸ್ ನಡುವೆ ಅಧಿಕಾರಕ್ಕಾಗಿ ಯುದ್ಧ ಶುರುವಾಗಿದೆ. ಭಾರಿ ಸಂಖ್ಯೆಯಲ್ಲಿ ಡ್ರ್ಯಾಗನ್ಗಳು ಸಹ ಯುದ್ಧದಲ್ಲಿ ಪಾಲ್ಗೊಂಡಿವೆ ಎಂಬುದು ಟ್ರೈಲರ್ನಿಂದ ತಿಳಿದು ಬಂದಿದೆ.