ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು,ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ ಆಡಳಿತ ಹೇಳಿದೆ.
ರಾಜಧಾನಿ ಬ್ರಟಿಸ್ಲಾವಾದಿಂದ ಉತ್ತರಕ್ಕಿರುವ ಹ್ಯಾಂಡ್ಲೊವಾದಲ್ಲಿ ಆಯೋಜನೆಗೊಂಡಿದ್ದ ಸರ್ಕಾರಿ ಸಭೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದ ಅವರ ಮೇಲೆ ವ್ಯಕ್ತಿಯೊಬ್ಬ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ.
BREAKING: Slovakian Prime Minister Robert Fico has been shot while greeting a crowd in the town of Handlova.
According to the BBC, a witness heard three or four shots and saw Fico fall to the ground with apparent wounds to his chest and head.
He was rushed to the hospital… pic.twitter.com/e946DL5FWb
— Collin Rugg (@CollinRugg) May 15, 2024
ಫಿಕೊ ಅವರ ಹೊಟ್ಟೆಗೆ ಗುಂಡುಗಳು ಹೊಕ್ಕಿರುವುದರಿಂದ ಅಲ್ಲಿಯೇ ಅವರು ಕುಸಿದು ಬಿದ್ದರು. ತಕ್ಷಣ ಅವರನ್ನು ಹೆಲಿಕಾಪ್ಟರ್ ಮೂಲಕ ಬನಾಸ್ಕಾ ಬಿಸ್ಟಾರಿಕಾ ಆಸ್ಪತ್ರೆಗೆ ಸಾಗಿಸಲಾಯಿತು.ಇದಾದ ಬಳಿಕ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆದಾಗ್ಯೂ, ದಾಳಿ ಮಾಡಿರುವ ದುಷ್ಕರ್ಮಿ ಯಾರು? ಆತನ ಹೆಸರೇನು? ಯಾವ ಸಂಘಟನೆಗೆ ಸೇರಿದವನು? ದಾಳಿ ಮಾಡಿದ್ದೇಕೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
59 ವರ್ಷದ ರಾಬರ್ಟ್ ಫಿಕೊ ಅವರ ಮೇಲೆ ನಾಲ್ಕು ಗುಂಡು ಹಾರಿಸಲಾಗಿದೆ. ಒಂದು ಗುಂಡು ಅವರ ಹೊಟ್ಟೆಗೆ ತಗುಲಿದ ಕಾರಣ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ರಾಬರ್ಟ್ ಫಿಕೊ ಶೀಘ್ರವೇ ಗುಣಮುಖರಾಗಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ. ದಾಳಿಯನ್ನು ಸ್ಲೊವಾಕಿಯಾ ಸರ್ಕಾರವೂ ದೃಢಪಡಿಸಿದೆ. “ರಾಬರ್ಟ್ ಫಿಕೊ ಅವರ ಮೇಲೆ ದಾಳಿ ನಡೆದಿರುವ ವಿಚಾರ ತಿಳಿದು ಬೇಸರವಾಯಿತು. ಅವರು ಶೀಘ್ರವೇ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಸ್ಲೊವಾಕಿಯಾ ಅಧ್ಯಕ್ಷೆ ಜುಜಾನ ಕ್ಯಾಪುಟೋವಾ ಪೋಸ್ಟ್ ಮಾಡಿದ್ದಾರೆ.