Sunday, January 11, 2026

ಅಡುಗೆ ಸಿಲಿಂಡರ್‌ ಸೋರಿಕೆಯಿಂದ ಬೆಂಕಿ: ಮನೆಯಲ್ಲಿ ಮಲಗಿದ್ದವರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೀಣ್ಯ ಠಾಣೆ ವ್ಯಾಪ್ತಿಯ ಚೊಕ್ಕಸಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ಅವಘಡ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬಿಹಾರ ಮೂಲದ ಅಂಶುರಾಜ್ ಕುಮಾರ್ (18), ಹುಸೇನ್ ಖಾನ್ (21), ರೋಹಿತ್ ಚೌದರಿ (20), ಆರಬೇಗ್ ಆಲಂ (26) ಹಾಗೂ ಮುಜಾಫರ್ ಹುಸೇನ್ (19) ಎಂಬ‌ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಐವರೂ ಚೊಕ್ಕಸಂದ್ರದಲ್ಲಿ ಒಂದೇ ರೂಮ್‌ನಲ್ಲಿ ವಾಸವಿದ್ದರು. ರೂಮ್‌ನಲ್ಲಿದ್ದ ಸಿಲಿಂಡರ್‌ನಿಂದ ಅಡುಗೆ ಅನಿಲ ಸೋರಿಕೆ ಆಗಿರುವುದನ್ನು ಅರಿಯದೆ ಶುಕ್ರವಾರ ಬೆಳಿಗ್ಗೆ ಟೀ ಕಾಯಿಸಲು ಲೈಟರ್ ಹೊತ್ತಿಸಿದಾಗ ಅಗ್ನಿ ಅವಘಡ ಸಂಭವಿಸಿದೆ. ಗಾಯಾಳುಗಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!