ಈಗಿನ ಮಕ್ಕಳಿಗೆ ಟಿವಿ, ಮೊಬೈಲ್ ಇಲ್ಲದೆ ದಿನವೇ ಕಳೆಯೋದಿಲ್ಲ. ಪೋಷಕರು ತಮ್ಮ ಸಮಯ ಪಡೆದುಕೊಳ್ಳೋದಕ್ಕೆ ಮಕ್ಕಳ ಕೈಗೆ ಫೋನ್, ಟಿವಿ ಕೊಟ್ಟು ಕೂರಿಸುತ್ತಾರೆ. ಆದರೆ ಮಕ್ಕಳಿಗೆ ಟಿವಿ ಅಥವಾ ಮೊಬೈಲ್ ನೊಡೋಕೆ ಬಿಟ್ರೆ ಏನಾಗುತ್ತದೆ ಗೊತ್ತಾ?
- ಸಾಕಷ್ಟು ಸಮಯ ವೇಸ್ಟ್ ಆಗುತ್ತದೆ
- ಭಾಷೆ ಹಾಗೂ ಸೋಶಿಯಲ್ ಸ್ಕಿಲ್ಸ್ ಬೆಳೆಯೋದಿಲ್ಲ
- ಕ್ರಿಯೇಟಿವಿಟಿ ಹಾಗೂ ಇಮ್ಯಾಜಿನೇಷನ್ ಬೆಳೆಯದು
- ಫೋಕಸ್ ಇಲ್ಲದಂತಾಗುತ್ತದೆ
- ಸುಮ್ಮನೆ ಕುಳಿತು ಟೈಮ್ ಪಾಸ್ ಮಾಡುವ ಅಭ್ಯಾಸ
- ತಿಂದು ತಿಂದು ಟಿವಿ ನೋಡುತ್ತಾ ಕುಳಿತು ಬೊಜ್ಜು
- ಹೃದಯ ಹಾಗೂ ಕಣ್ಣಿಗೆ ಹಾಕಿ
- ನೆಗೆಟಿವ್ ಬಿಹೇವಿಯರ್
- ಬೇರೆ ಯಾವ ವಿಷಯದಲ್ಲೂ ಆಸಕ್ತಿ ಇಲ್ಲದಿರುವುದು
- ಓದುವುದರಲ್ಲಿ ಆಸಕ್ತಿ ಕಡಿಮೆ
- ವಯಸ್ಸಿಗೆ ಮೀರಿದ ಬುದ್ಧಿ
- ಸೆಕ್ಸ್ ಹಾಗೂ ವೈಲೆನ್ಸ್ ಬಗ್ಗೆ ಆಸಕ್ತಿ
- ಸಾಮಾಜಿಕವಾಗಿ ಬೆರೆಯಲು ಇಷ್ಟಪಡದಿರುವುದು
- ನಿದ್ದೆ ಬಾರದಿರುವುದು
- ಕುತ್ತಿಗೆ ನೋವು