ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಆರಂಭಗೊಂಡಿದ್ದು, ನಾಲ್ಕು ಹಂತದ ಮತದಾನ ಮುಗಿದಿದ್ದು, ಐದನೇ ಹಂತದ ತಯಾರಿ ಆರಂಭವಾಗಿದೆ. ಸಂದರ್ಶನವೊಂದರಲ್ಲಿ ಕೇಳಿದ ಚುನಾವಣೆ ಕುರಿತ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಾಲ್ಕು ಹಂತದ ಚುನಾವಣೆಯ ನಂತರ ಗೆಲುವಿನ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾಗಿದೆಯೇ? ವಿಪಕ್ಷಗಳು 200 ಸೀಟು ಎಂದು ಹೇಳಿದರೆ 400 ಸೀಟು ಎಂದು ಹೇಳುತ್ತೀರಾ? ಎಂದು ಪ್ರಶ್ನೆ ಕೇಳಲಾಗಿತ್ತು, ಇದಕ್ಕೆ ಉತ್ತರಿಸಿದ ಮೋದಿ, ನಾಲ್ಕು ಹಂತಗಳಲ್ಲಿ ಚುನಾವಣೆ ನಡೆದಿದೆ, ಮೊದಲ ಹಂತದಲ್ಲಿ ವಿರೋಧ ಇದ್ದಂತೆ ಕಂಡರೂ ಎರಡು, ಮೂರು ಮತ್ತು ನಾಲ್ಕನೇ ಹಂತದಲ್ಲಿ ಆ ವಿರೋಧ ಕಣ್ಮರೆಯಾಯಿತು.
ಈ ಬಾರಿ ಜನಾದೇಶ ಉತ್ತಮವಾಗಲಿದೆ. ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಮೈತ್ರಿಕೂಟಕ್ಕೆ ಪ್ರಚಂಡ ಗೆಲುವು ನೀಡಲಿದೆ ಎಂದ ಅವರು ಹೇಳಿದ್ದಾರೆ.
ಬಿಜೆಪಿ ತನ್ನ ಹಳೆಯ ದಾಖಲೆಗಳ ಜೊತೆಗೆ ಭಾರತೀಯ ರಾಜಕೀಯದ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂದು ಈ ಮೂಲಕ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.