ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ಮನರಂಜನೆಗಾಗಿ ಹಾಕಿದ ಒಂದು ಇನ್‌ಸ್ಟಾಗ್ರಾಂ ರೀಲ್ ಒಂದು ಭಾರಿ ವೈರಲ್ ಆಗಿದೆ. ಮಹಾರಾಷ್ಟ್ರದ ಯುವಕನೊಬ್ಬ ಬೆಂಗಳೂರಿನ ಐಟಿ ಪಾರ್ಕ್ ಅನ್ನು ನ್ಯೂಯಾರ್ಕ್‌ಗೆ ಹೋಲಿಸಿ ಮಾಡಿದ ವಿಡಿಯೋ, ನಗರಾಭಿವೃದ್ಧಿ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರ ಕೊಟ್ಟಂತಿದೆ.
ಫಾರ್ಮಲ್ಸ್ ನಲ್ಲಿ ಐಡಿ ಕಾರ್ಡ್ ಧರಿಸಿ, ಸ್ವಚ್ಛ ಹಾಗೂ ಅಗಲವಾದ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುವಾಗ ಯುವಕ ವಿಡಿಯೋ ಆರಂಭಿಸುತ್ತಾ “ನ್ಯೂಯಾರ್ಕ್‌ನ ಐಟಿ ಪಾರ್ಕ್‌ಗೆ ಸ್ವಾಗತ” ಎಂದು ಮರಾಠಿಯಲ್ಲಿ ಹೇಳುತ್ತಾ, ಸುತ್ತಲಿನ ಎಸ್ಕಲೇಟರ್, ಫುಟ್‌ಪಾತ್, ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆ ಮತ್ತು ಹಸಿರಿನಿಂದ ತುಂಬಿರುವ ಪರಿಸರವನ್ನು ತೋರಿಸುತ್ತಾನೆ. ಈ ವಿದೇಶಿ ವಾತಾವರಣವೇ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: FOOD | ಈರುಳ್ಳಿ ಪರೋಟ ತಿಂದಿದ್ದೀರಾ? ಇಲ್ಲಾಂದ್ರೆ ಒಮ್ಮೆ ಟ್ರೈ ಮಾಡಿ
ಆದರೆ ಮಧ್ಯದಲ್ಲಿ ಬರುವ ಟ್ವಿಸ್ಟ್ ಎಲ್ಲರನ್ನೂ ಅಚ್ಚರಿಗೊಳಿಸುತ್ತೆ. ಇದು ನ್ಯೂಯಾರ್ಕ್ ಅಲ್ಲ, ಬೆಂಗಳೂರಿನ ಐಟಿ ಪಾರ್ಕ್ ಎಂದು ಹೇಳುವ ಮೂಲಕ, “ಪುಣೆಗೆ ಇಂತಹ ಮೂಲಸೌಕರ್ಯ ಯಾವಾಗ?” ಎಂದು ಪ್ರಶ್ನಿಸುತ್ತಾನೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಯೋಜಿತ ಅಭಿವೃದ್ಧಿ ಅಂದರೆ ಇದು,” ಎಂದು ಕೆಲವರು ಬೆಂಗಳೂರನ್ನು ಹೊಗಳಿದರೆ, “ಪ್ರತಿ ನಗರಕ್ಕೂ ಇಂತಹ ಸೌಲಭ್ಯ ಬೇಕು” ಎಂದು ಇನ್ನೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

