July 29, 2026
Wednesday, July 29, 2026
spot_img

ಕುವೈತ್‌ನಲ್ಲಿ ಅಮೆರಿಕದ ಫೈಟರ್ ಜೆಟ್ ಪತನ: ಪೈಲಟ್ ಪಾರಾಗಿದ್ದೇ ಒಂದು ಪವಾಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುವೈತ್‌ನಲ್ಲಿ ಅಮೆರಿಕ ವಾಯುಪಡೆಯ F-15E ಸ್ಟ್ರೈಕ್ ಈಗಲ್ ಯುದ್ಧವಿಮಾನ ಪತನಗೊಂಡ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ವಿಮಾನ ಬೆಂಕಿಗಾಹುತಿಯಾಗಿ ಸುರುಳಿಯಾಕಾರದಲ್ಲಿ ಸುತ್ತಿಕೊಂಡು ಕೆಳಗೆ ಬೀಳುತ್ತಿರುವ ದೃಶ್ಯ ವೈರಲ್ ಆಗಿದೆ. ಪತನಕ್ಕೂ ಮುನ್ನ ಪೈಲಟ್ ಸುರಕ್ಷಿತವಾಗಿ ಹೊರಗೆ ಜಿಗಿದಿದ್ದಾರೆ ಎಂದು ವರದಿಗಳು ತಿಳಿಸಿವೆ.

ರಷ್ಯಾ–ಉಕ್ರೇನ್ ಯುದ್ಧದ ನಂತರ ಈಗ ಇರಾನ್–ಅಮೆರಿಕ–ಇಸ್ರೇಲ್ ಸಂಘರ್ಷ ತೀವ್ರಗೊಂಡಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದೇ ಮಾದರಿಯ ಯುದ್ಧವಿಮಾನಗಳನ್ನು ಇಸ್ರೇಲ್ ಕೂಡ ಬಳಸುವುದರಿಂದ ಪತನಗೊಂಡ ವಿಮಾನ ಅಮೆರಿಕದ್ದೇ ಎಂಬುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ:

ಇನ್ನುಳಿದಂತೆ ಈ ಯುದ್ಧದ ಕುರಿತು ಜಾಗತಿಕ ರಾಜಕೀಯ ವಲಯದಲ್ಲೂ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆಸ್ಟ್ರೇಲಿಯಾ ಮತ್ತು ಕೆನಡಾ ಅಮೆರಿಕ–ಇಸ್ರೇಲ್ ಕ್ರಮವನ್ನು ಬೆಂಬಲಿಸಿದರೆ, ರಷ್ಯಾ ಹಾಗೂ ಚೀನಾ ದಾಳಿಯನ್ನು ಖಂಡಿಸಿವೆ. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಮತ್ತು ಜರ್ಮನಿ ನಾಯಕರು ಶಾಂತಿ ಮಾತುಕತೆ ಅಗತ್ಯವೆಂದು ಒತ್ತಾಯಿಸಿದ್ದಾರೆ.

ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳು ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿಯನ್ನು ಖಂಡಿಸಿದರೂ, ಹೆಚ್ಚಿನ ದೇಶಗಳು ತಟಸ್ಥ ನಿಲುವು ತಾಳಿವೆ. ಪರಿಸ್ಥಿತಿ ಮತ್ತಷ್ಟು ಗಂಭೀರಗೊಳ್ಳುವ ಆತಂಕ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !