ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಚಂದ್ರನನ್ನು ತಲುಪಿದೆ. ಆದರೆ ಇಲ್ಲಿನ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ ಎಂದು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ ಸಂಸದ ಸೈಯದ್ ಮುಸ್ತಫಾ ಕಮಾಲ್ ಪಾಕಿಸ್ತಾನದ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಆಡಳಿತ ವ್ಯವಸ್ಥೆಯನ್ನು ಟೀಕಿಸಿದ ಸಂಸದರು ಭಾರತದ ಅಭಿವೃದ್ಧಿಯನ್ನು ಹೊಗಳಿದರು ಮತ್ತು ಪಾಕಿಸ್ತಾನದ ದುರಾಡಳಿತವನ್ನು ಟೀಕಿಸಿದರು. ಭಾರತವು ಚಂದ್ರನನ್ನು ತಲುಪಿದೆ ಎಂದು ಟಿವಿಯಲ್ಲಿ ಸುದ್ದಿ ನೋಡಿದ ಎರಡು ಸೆಕೆಂಡುಗಳ ನಂತರ, ಕರಾಚಿಯಲ್ಲಿ ತೆರೆದ ಚರಂಡಿಗೆ ಬಿದ್ದು ಮಗು ಸಾವನ್ನಪ್ಪಿದೆ ಎಂಬ ಸುದ್ದಿ ಬರುತ್ತದೆ.
ಕರಾಚಿಯಲ್ಲಿ ಶುದ್ಧ ನೀರಿನ ಕೊರತೆಯ ವಿಷಯ ಬಂದಾಗ, ಕರಾಚಿ ಪಾಕಿಸ್ತಾನಕ್ಕೆ ಆದಾಯದ ಮೂಲವಾಗಿದೆ. ದೇಶವು ಕರಾಚಿಯಲ್ಲಿ ಎರಡು ಬಂದರುಗಳನ್ನು ಹೊಂದಿದೆ. ಒಂದರ್ಥದಲ್ಲಿ ಇದು ದೇಶದ ಹೆಬ್ಬಾಗಿಲು. ಆದರೆ ಕರಾಚಿಗೆ 15 ವರ್ಷಗಳಿಂದ ಶುದ್ಧ ನೀರು ಸಿಕ್ಕಿಲ್ಲ. ಪ್ರತಿ ಬಾರಿ ನೀರು ಬಂದಾಗಲೂ ಟ್ಯಾಂಕರ್ ಮಾಫಿಯಾ ಆಕ್ರಮಿಸಿದೆ ಎಂದು ಕಿಡಿಕಾರಿದ್ದಾರೆ.