Sunday, January 11, 2026

ಯಾರಾದ್ರೂ ಒಂದು ನೊಬೆಲ್ ಕೊಡಬಾರ್ದಾ! ಮತ್ತೆ ಶುರುವಾಯ್ತು ಟ್ರಂಪ್ ಅದೇ ರಾಗ.. ಅದೇ ಹಾಡು..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ರಾಜಕೀಯದಲ್ಲಿ ತನ್ನ ಪಾತ್ರವನ್ನು ಮತ್ತೊಮ್ಮೆ ದೊಡ್ಡದಾಗಿ ಬಿಂಬಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ತಾನೇ ಎಂದು ಪುನರುಚ್ಚರಿಸಿದ್ದಾರೆ. ಜೊತೆಗೆ, ನೊಬೆಲ್ ಶಾಂತಿ ಪ್ರಶಸ್ತಿಗೆ ತನ್ನಿಗಿಂತ ಹೆಚ್ಚು ಅರ್ಹ ವ್ಯಕ್ತಿ ಇತಿಹಾಸದಲ್ಲೇ ಯಾರೂ ಇಲ್ಲ ಎಂದು ಹೇಳಿದ್ದಾರೆ.

ಶ್ವೇತಭವನದಲ್ಲಿ ತೈಲ ಮತ್ತು ಅನಿಲ ಕ್ಷೇತ್ರದ ಉನ್ನತಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಟ್ರಂಪ್, ಕಳೆದ ವರ್ಷ ಮೇ ತಿಂಗಳಲ್ಲಿ ಭಾರತ–ಪಾಕಿಸ್ತಾನ ನಡುವೆ ಉಂಟಾದ ಉದ್ವಿಗ್ನ ಪರಿಸ್ಥಿತಿಯಲ್ಲಿ ಎಂಟು ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಆ ವಿಮಾನಗಳು ಯಾವ ದೇಶಕ್ಕೆ ಸೇರಿದವು ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ.

ಇದನ್ನೂ ಓದಿ: FOOD | ಮಂಗಳೂರು ಸ್ಟೈಲ್ ಬನ್ಸ್ ಮಾಡೋದು ಎಷ್ಟು ಸುಲಭ ಗೊತ್ತಾ? ನೀವೂ ಒಮ್ಮೆ ಟ್ರೈ ಮಾಡಿ

ನನ್ನನ್ನು ಜನ ಇಷ್ಟಪಡಲಿ ಅಥವಾ ಬಿಡಲಿ, ನಾನು ಎಂಟು ದೊಡ್ಡ ಯುದ್ಧಗಳನ್ನು ನಿಲ್ಲಿಸಿದ್ದೇನೆ. ಕೆಲ ಸಂಘರ್ಷಗಳು ದಶಕಗಳ ಕಾಲ ಮುಂದುವರಿದಿದ್ದವು. ಭಾರತ ಮತ್ತು ಪಾಕಿಸ್ತಾನದಂತಹ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ಮತ್ತೆ ಯುದ್ಧದ ಅಂಚಿಗೆ ಬಂದಿದ್ದವು ಎಂದು ಟ್ರಂಪ್ ಹೇಳಿದರು. ಕಳೆದ ವರ್ಷ ಶ್ವೇತಭವನಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡ, ಈ ಸಂಘರ್ಷ ನಿಲ್ಲಿಸುವಲ್ಲಿ ಟ್ರಂಪ್ ಪಾತ್ರ ಮಹತ್ವದ್ದೆಂದು ಹೇಳಿದ್ದಾರಂತೆ.

ಎರಡನೇ ಅವಧಿಯಲ್ಲಿ ಕೇವಲ ಎಂಟು ತಿಂಗಳಲ್ಲಿ ಎಂಟು ಯುದ್ಧಗಳನ್ನು ತಡೆದಿದ್ದೇನೆ. ಆದರೂ ನನಗೆ ನೊಬೆಲ್ ಸಿಗುವುದಿಲ್ಲ ಎಂದು ಟ್ರಂಪ್ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ, ಒಬಾಮಾ ನೊಬೆಲ್ ಪಡೆದ ವಿಚಾರವನ್ನು ಉಲ್ಲೇಖಿಸಿ ತೀವ್ರ ಟೀಕೆಯನ್ನೂ ನಡೆಸಿದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!