ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಹೀರಾತು ಹಾಗೂ ಸಿನಿಮಾಗಳು ಮಕ್ಕಳ ಮನಸ್ಸಿನ ಮೇಲೆ ಅದೆಷ್ಟು ಕೆಟ್ಟ ಪರಿಣಾಮ ಬೀರುತ್ತಿವೆ ಎನ್ನುವುದಕ್ಕೆ ಇದೊಂದು ಸಾಕ್ಷಿ…
ಹೀರೊಗಳು, ಕ್ರಿಕೆಟಿಗರು, ಸೆಲೆಬ್ರಿಟಿಗಳು (Celebrities) ನೂರಾರು ಉತ್ಪನ್ನಗಳ ಜಾಹೀರಾತುಗಳಲ್ಲಿ (Advertisements) ಅಭಿನಯಿಸುವ ಮೂಲಕ, ಆ ಉತ್ಪನ್ನಗಳನ್ನೂ ತಾವೇ ಬಳಸಿದ್ದೇವೆ ಎಂದು ಹೇಳುವ ಮೂಲಕ ಅಥವಾ ನಟಿಸುವ ಮೂಲಕ ಕೋಟ್ಯಂತರ ಜನರನ್ನು ಸೆಳೆಯುತ್ತಾರೆ. ಹೀಗೆ ನಟರು ಸೇರಿ ಸೆಲೆಬ್ರಿಟಿಗಳ ಜಾಹೀರಾತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಹೌದು, ಶಾರುಖ್ ಖಾನ್ ಅವರ ಪಾನ್ ಮಸಾಲ (Pan Masala) ಜಾಹೀರಾತಿನಿಂದ ಪ್ರಚೋದನೆಗೊಂಡು ಗುಟ್ಕಾ ಸೇವಿಸಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್ ಆಗಿದೆ.
https://www.facebook.com/watch/?v=300373156450832
ಮಕ್ಕಳು ಗುಟ್ಕಾ ತಿಂದು, ಅದರ ಪರಿಣಾಮ ಗೊತ್ತಿರದೆ ಮಾತನಾಡಿದ ವಿಡಿಯೊ ವೈರಲ್ ಆಗಿದ್ದು,. “ನೀವು ಗುಟ್ಕಾ ತಿಂತಿದ್ದೀರಲ್ಲ, ಸತ್ತು ಹೋದ್ರೆ ಏನ್ ಗತಿ” ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಕೇಳುತ್ತಾರೆ. ಆಗ ಮಕ್ಕಳು, “ಶಾರುಖ್ ಖಾನ್ ಸತ್ತಿಲ್ಲ, ನಾವು ಸಾಯ್ತೀವಾ” ಎಂದಿದ್ದಾರೆ.
“ಶಾರುಖ್ ಖಾನ್ ಏಕೆ ಸಾಯುತ್ತಾರೆ” ಎಂಬ ಪ್ರಶ್ನೆಗೆ, “ಶಾರುಖ್ ಖಾನ್ ಗುಟ್ಕಾ ತಿಂತಾರಲ್ಲ, ಅವ್ರೇ ಸಾಯಲ್ಲ, ನಾವ್ ಹೇಗೆ ಸಾಯ್ತೀವಿ” ಎಂದಿದ್ದಾರೆ. ಅಷ್ಟೇ ಅಲ್ಲ, “ಶಾರುಖ್ ಖಾನ್ ಗುಟ್ಕಾ ತಿನ್ನೋದು ನಿಮಗೆ ಹೇಗೆ ಗೊತ್ತು” ಎಂದು ಕೇಳಿದ್ದಕ್ಕೆ, “ಜಾಹೀರಾತಿನಲ್ಲಿ ನೋಡಿದ್ದೀವಲ್ಲ” ಎಂದಿದ್ದಾರೆ.
ಶಾರುಖ್ ಖಾನ್ ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದನ್ನೇ ಈ ಮಕ್ಕಳು ನಿಜ ಎಂದು ಭಾವಿಸಿದ್ದಾರೆ. ಶಾರುಖ್ ಖಾನ್ ಗುಟ್ಕಾ ತಿಂತಾರೆ, ಅವರಿಗೇ ಏನೂ ಆಗಲ್ಲ. ಇನ್ನು ನಮಗೆ ಏನಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂದು, ಚಿಕ್ಕ ವಯಸ್ಸಿನಲ್ಲೇ ಗುಟ್ಕಾ ತಿನ್ನೋದನ್ನು ಕಲಿತಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳ ಜಾಹೀರಾತುಗಳಲ್ಲಿ ನಟಿಸುವಾಗ, ಆ ಉತ್ಪನ್ನದಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮ ಏನು ಎಂಬುದನ್ನು ಈ ವಿಡಿಯೊ ನೋಡಿ ಕಲಿಯಬೇಕಿದೆ ಎಂದು ಆಗ್ರಹಿಸಿದ್ದಾರೆ.