ಅಭಿವೃದ್ಧಿಗೆ ಮತ ಹಾಕಿ ಎಂದ ರಶ್ಮಿಕಾ ಟ್ವೀಟ್ ಗೆ ಪ್ರಧಾನಿ ಮೋದಿ ರೀಟ್ವೀಟ್! ಏನದು ಸಂದೇಶ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇದಕ್ಕೆ ಕಾರಣ ಅವರ ಸಿನಿಮಾಗಳು. ಯಶಸ್ವಿ ಚಿತ್ರಗಳ ಯಶಸ್ಸಿನೊಂದಿಗೆ ಅವರ ಖ್ಯಾತಿ ಬೆಳೆಯಿತು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ. ಈಗ ಅವರು ಅಟಲ್ ಸೇತು ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಟ್ವೀಟ್​ನ ಪ್ರಧಾನಿ ನರೇಂದ್ರ ಮೋದಿ ರೀಟ್ವೀಟ್ ಮಾಡಿದ್ದಾರೆ.

ಅಟಲ್ ಸೇತುವನ್ನು ಭಾರತದ ಅತಿ ಉದ್ದದ ಸಮುದ್ರ ಸೇತುವೆ ಎಂದು ಪರಿಗಣಿಸಲಾಗಿದೆ. ಇದು ಮುಂಬೈ ಮತ್ತು ನವಿ ಮುಂಬೈಯನ್ನು ಸಂಪರ್ಕಿಸುತ್ತದೆ. ಅದಕ್ಕೆ ರಶ್ಮಿಕಾ ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ರಶ್ಮಿಕಾ, ‘ಭಾರತದ ಅತಿ ಉದ್ದನೆಯ ಸಮುದ್ರ ಬ್ರಿಜ್. 22 ಕಿಲೋಮೀಟರ್ ಉದ್ದ ಇದೆ. ಎರಡು ಗಂಟೆಗಳ ಪ್ರಯಾಣ ಈಗ 20 ನಿಮಿಷಗಳಲ್ಲಿ ಮುಗಿಯುತ್ತದೆ. ನಂಬಲೂ ಅಸಾಧ್ಯ. ಕೆಲ ವರ್ಷಗಳ ಹಿಂದೆ ಯಾರೂ ಇದನ್ನು ಊಹಿಸಿಯೂ ಇರಲಿಲ್ಲ’ ಎಂದಿದ್ದಾರೆ ರಶ್ಮಿಕಾ.”

“ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ, ಪೂರ್ವ ಭಾರತದಿಂದ ಪಶ್ಚಿಮ ಭಾರತಕ್ಕೆ, ಜನರು ಮತ್ತು ಹೃದಯಗಳನ್ನು ಸಂಪರ್ಕಿಸುವ” ವೀಡಿಯೊ ಶೀರ್ಷಿಕೆಯಾಗಿದೆ. ಇದನ್ನು ರೀಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಜನರನ್ನು ಒಟ್ಟಿಗೆ ಸೇರಿಸುವುದು ಮತ್ತು ಅವರ ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚಿನ ತೃಪ್ತಿ ಇಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!