ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಿಟಕಿ ಮೂಲಕ ತಲೆಯನ್ನು ಹೊರಹಾಕಿದಾಗ ಅವರ ತಲೆ ಕಿಟಕಿಗೆ ಸಿಕ್ಕಿಹಾಕಿಕೊಂಡು ಪರದಾಡಿದ ಘಟನೆ ನಡೆದಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ತಲೆ ಕಿಟಕಿಯಿಂದ ಹೊರಗೆ ಹಾಕಿದಾಗ ಕಿಟಕಿಯಲ್ಲಿ ತಲೆ ಸಿಲುಕಿಕೊಂಡಿದೆ. ಉಗಳುವ ಭರದಲ್ಲಿ ಕಿಟಕಿಯ ಸಣ್ಣ ಸಂದಿಯಿಂದಲೇ ತಲೆ ಹೊರ ಹಾಕಿದಾ ಮಹಿಳೆಯ ತಲೆ ಕಿಟಕಿಯಲ್ಲಿ ಲಾಕ್ ಆಗಿದೆ. ಕಿಟಕಿಯಲ್ಲಿ ಸಣ್ಣ ಜಾಗವಿದ್ದ ಕಾರಣ ಅರ್ಧ ಗಂಟೆಗೂ ಹೆಚ್ಚು ಕಾಲ ತಲೆ ಕಿಟಕಿಯಲ್ಲೇ ಲಾಕ್ ಆಗಿದೆ.
ಆ ಸಮಯದಲ್ಲಿ ಮಹಿಳೆಯ ತಲೆಯನ್ನು ಗಮನಿಸಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರು ಮಹಿಳೆಯ ಚಲನವಲನ ನೋಡಿ ಬಸ್ ನಿಲ್ಲಿಸಿದ್ದಾರೆ. ನಂತರ ಅವರು ಮಹಿಳೆಯನ್ನು ಬಹಳ ಎಚ್ಚರಿಕೆಯಿಂದ ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.