ಹೊಸದಿಗಂತ ವರದಿ, ನಾಗಮಂಗಲ :
ರಾಜ್ಯದಲ್ಲಿ ಮಳೆ ವಿಪರೀತ ಬರ ಆವರಿಸಿರುವುದರಿಂದ ಬಿಸಿಲ ಬೇಗೆಯನ್ನು ತಾಳಲಾರದೆ ಜನತೆ ವರುಣದೇವನಿಗಾಗಿ ವಿಶೇಷ ಪೂಜೆ ನಡೆಸುತ್ತಿದ್ದಾರೆ.
ನಾಗಮಂಗಲ ಪಟ್ಟಣದಲ್ತ್ತಿಗಳ ಮೆರವಣಿಗೆ ಮಾಡಿ ದೇವರಿಗೆ ಹರಕೆ ಕಟ್ಟಿ ಪೂಜಾದಿ ಕಾರ‌್ಯಗಳನ್ನು ನೆರವೇರಿಸಿದರು.
ಸಕಾಲದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು, ಕೃಷಿ ಭೂಮಿ ಪಾಂಡವರ ಬೀಳಿನಂತಾಗಿದೆ.ತೆಂಗು ಅಡಿಕೆ ಮರಗಳು ಧರೆಗುರುಳುತ್ತಿವೆ. ರೈತಾಪಿ ವರ್ಗದ ಆದಾಯದ ಮೂಲ ಕೃಷಿ ಬೆಳೆಗಳಾದ್ದರಿಂದ ಬೆಳೆಗಳಿಗೆ ಅಗತ್ಯ ನೀರಿನ ಮೂಲಸೆಲೆ ಮಳೆಯ ಬರುವಿಕೆಗಾಗಿ ಪೂಜೆ ನೆರವೇರಿಸಲಾಗುತ್ತಿರುವುದಾಗಿ ಮುಖಂಡರು ತಿಳಿಸಿದರು.
ಪ್ರತಿನಿತ್ಯ ತೀವ್ರ ಬಿಸಿಲು ಮತ್ತು ಮೋಡ ಕವಿದ ವಾತಾವರಣವಿದ್ದರು ತುಂತುರು ಹನಿಯ ಸಿಂಚನವಷ್ಟೇ ಆಗುತ್ತಿದೆ ಕಾಲಾನುಕ್ರಮದಲ್ಲಿ ಸೂಕ್ತ ಮಳೆಯಾದರೆ ಜನ-ಜಾನುವಾರುಗಳಿಗೆ ಕುಡಿಯಲು ಹಾಗೂ ಬೇಸಾಯಕ್ಕೆ ನೀರು ದೊರಕಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ಗಂಗಾ ಮಾತೆ ಮತ್ತು ವರುಣ ದೇವರಿಗೆ ಪೂಜೆ ಸಲ್ಲಿಸಿ ನಾಡಿನ ಜನರು ಸುಭಿಕ್ಷತೆಯಿಂದ ಬದುಕಲು ಅನುವು ಮಾಡಿಕೊಡಿರೆಂದು ದೇವರಲ್ಲಿ ಮೊರೆಯಿಟ್ಟರು.
ಪ್ರಾಚ್ಯ ವಸ್ತು ಸಂಗ್ರಾಹಕ ರಾಮಕೃಷ್ಣ. ಕನ್ನಡ ಸಂಘದ ಅಧ್ಯಕ್ಷರಾದ ಅಲಮೇಲು ಇತರರಿದ್ದರು.