ಹೊಸದಿಗಂತ ವರದಿ, ಹುಬ್ಬಳ್ಳಿ:
ನಗರದಲ್ಲಿ ರಾಜ್ಯವೇ ಬೆಚ್ಚಿ ಬಿಳಿಸುವಂತ ಎರಡು ಕೊಲೆ ಪ್ರಕರಣಗಳು ನಡೆದರೂ ಗೃಹ ಸಚಿವ ಜಿ. ಪರಮೇಶ್ವರ ಭೇಟಿ ಮಾಡಿಲ್ಲ. ಎಡಿಜಿಪಿಗಳು ಏನು ಮಾಡುತ್ತಿದ್ದಾರೆ? ಹುಬ್ಬಳ್ಳಿ ರಾಜ್ಯದಲ್ಲಿ ಇದೆಯಾ ಅಥವಾ ಇಲ್ಲಾ ಎಂದು ಶಾಸಕ ಮಹೇಶ ಟೆಂಗಿನಕಾಯಿ ಪ್ರಶ್ನಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದು ಶಾಂತಿ ಹಾಗೂ ಶೈಕ್ಷಣಿಕ ನಗರ ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕ ಎರಡನೇ ರಾಜಧಾನಿ ಹುಬ್ಬಳ್ಳಿಯಲ್ಲಿ ಕಳೆದ ಆರು ತಿಂಗಳಲ್ಲಿ ೧೦ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳು ನಡೆದಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ಹಾಗೂ ಡ್ರಗ್ಸ್ ಪ್ರಕರಣಗಳ ಹಾವಳಿ ಹೆಚ್ಚಾಗಿವೆ. ಇಲ್ಲಿಯ ವಿದ್ಯಾರ್ಥಿಗಳು ಮಾಧಕ ವಸ್ತುಗಳ ವೆಸನಿಗಳಾಗುತ್ತಿದ್ದಾರೆ. ಇಲ್ಲಿಯ ಪೊಲೀಸರು ಒಂದು ಬಾರಿಯೂ ಒಂದು ಕೆ.ಜಿ. ಗಾಂಜಾ ವಶಪಡಿಸಿಕೊಂಡಿಲ್ಲ. ಬಂತರು ಬೇಗ ಆರೋಪ ಮುಕ್ತರಾಗಬೇಕು ಎಂಬ ಉದ್ದೇಶದಿಂದ ಪೊಲೀಸ್ ಇಲಾಖೆ ಈ ಮಾರ್ಗ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಕೇವಲ ಕಾಟಾಚಾರಕ್ಕೆ ಪ್ರಕರಣಗಳ ದಾಖಲಿಸಿಕೊಳ್ಳುತ್ತಿದ್ದು, ಬುಡ ಸಮೇತ ಗಾಂಜಾ ಮಾರಾಟ ತಡೆಯುತ್ತಿಲ್ಲ. ಈ ವಿಚಾರದಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ತಮಿಳುನಾಡಿನಿಂದ ಪೊಲೀಸ್ ಬಂಧು ಇಲ್ಲಿಯ ಡ್ರಗ್ಸ್ ಆರೋಪಿಗಳ ಬಂಸುತ್ತಿದ್ದು. ಇಲ್ಲಿಯವರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ. ಎಲ್ಲವೂ ಪೊಲೀಸರ ಅಡಿಯಲ್ಲಿ ನಡೆಯುತ್ತಿವೆ ಎಂಬ ಅನುಮಾನ ಮೂಡುತ್ತಿವೆ ಎಂದರು.