ಹೊಸದಿಗಂತ ಡಿಜಿಟಲ್ ಡೆಸ್ಕ್:
ತೈವಾನ್ ಸಂಸತ್ತಿನಲ್ಲಿ ಭಾರೀ ಅಶಾಂತಿ ಉಂಟಾಗಿದ್ದು. ಸಂಸದೀಯ ಸುಧಾರಣಾ ಕ್ರಮಗಳ ಕುರಿತು ಚರ್ಚೆಯ ಸಂದರ್ಭದಲ್ಲಿ ಸಂಸದರು ಪರಸ್ಪರ ಜಗಳಕ್ಕೆ ಇಳಿದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಇದೀಗ ತೈವಾನ್ ಸಂಸತ್ತಿನಲ್ಲಿ ಇದರಿಂದ ದೊಡ್ಡ ಅವ್ಯವಸ್ಥೆ ಉಂಟಾಗಿದೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರದ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಜನಪ್ರತಿನಿಧಿಗಳಿಗೆ ಹೆಚ್ಚುವರಿ ಅಧಿಕಾರವನ್ನು ನೀಡುವ ವಿಷಯದ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಜನಪ್ರತಿನಿಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಕೆಲವು ಸಂಸದರು ಸ್ಪೀಕರ್ ಆಸನದತ್ತ ದಾಳಿ ಮಾಡಿದ್ದು. ಮೇಜುಗಳ ಮೇಲೆ ಜಿಗಿದಿದ್ದು, ಸಭಾಪತಿಯನ್ನು ಎಳೆದಾಡಿದ್ದಾರೆ. ಇದೀಗ ಈ ಸಭೆಯನ್ನು ಮುಂದೂಡಲಾಗಿದ್ದು, ಮಧ್ಯಾಹ್ನದ ನಂತರ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.