ಹೊಸದಿಗಂತ ಡಿಜಿಟಲ್ ಡೆಸ್ಕ್:
ನರೇಗಾ ಯೋಜನೆ ಜಾರಿ ಮತ್ತು ಕೇಂದ್ರದ ಅನುದಾನದ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ ತಾರಕಕ್ಕೇರಿದೆ. “ನರೇಗಾ ವಿಚಾರದಲ್ಲಿ ಚರ್ಚೆ ಮಾಡಲು ನಾನು ಸದಾ ಸಿದ್ಧ, ಬೇಕಿದ್ದರೆ ಇದಕ್ಕಾಗಿ ದೊಡ್ಡ ಆಂದೋಲನವನ್ನೇ ರೂಪಿಸುತ್ತೇವೆ” ಎಂದು ಮುಖ್ಯಮಂತ್ರಿಗಳು ಸವಾಲು ಹಾಕಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪ್ರತಿಭಟನೆಯನ್ನು ಟೀಕಿಸಿದ ಸಿಎಂ, “ರಾಜ್ಯಕ್ಕೆ ಎಷ್ಟೇ ಅನ್ಯಾಯವಾದರೂ ಬಿಜೆಪಿ ನಾಯಕರು ಧ್ವನಿ ಎತ್ತುತ್ತಿಲ್ಲ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯವನ್ನು ಇವರು ನ್ಯಾಯ ಎಂದು ಸಮರ್ಥಿಸಿಕೊಳ್ಳುತ್ತಿರುವುದು ದೊಡ್ಡ ಅಪರಾಧ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರು ಮಾಡಿದ್ದ “ಲೀಸ್ ಬೇಸ್ಡ್ ಸಿಎಂ” ಎಂಬ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಬಿಜೆಪಿಯವರ ಕೆಲಸವೇ ಸುಳ್ಳು ಹೇಳುವುದು. ಅವರ ಪ್ರತಿಯೊಂದು ಸುಳ್ಳಿಗೂ ಉತ್ತರ ಕೊಡುತ್ತಾ ಕೂರಲು ನನಗೆ ಸಮಯವಿಲ್ಲ” ಎಂದು ಲೇವಡಿ ಮಾಡಿದರು.


